ಎಸ್.ಕೆ.ಮಲ್ಲಿಕಾರ್ಜುನ ನೇಮಕ
Update: 2017-07-22 15:35 IST
ಚಿಕ್ಕಮಗಳೂರು, ಜು.22: ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿ ಅಧ್ಯಕ್ಷರಾಗಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಎಸ್.ಕೆ.ಮಲ್ಲಿಕಾರ್ಜುನ ಇವರನ್ನು ಕನ್ನಡ ಜಾನಪದ ಪರಿಷತ್ ಸಿಂಗಟಗೆರೆ ಹೋಬಳಿ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಈ ಕುರಿತು ಶನಿವಾರ ಹೇಳಿಕೆ ನೀಡಿದ್ದು, ಜಾನಪದದಲ್ಲಿ ವಿಶೇಷ ಆಸಕ್ತಿ ಇರುವ ಇವರು ಸಿಂಗಟಗೆರೆ ಹೋಬಳಿಯಲ್ಲಿರುವ ಜಾನಪದ ಕಲೆ ಮತ್ತು ಕಲಾವಿದರ ಮಾಹಿತಿ ಸಂಗ್ರಹ ಹಾಗೂ ನಶಿಸಿಹೋಗುತ್ತಿರುವ ಜಾನಪದ ಕಲೆಯನ್ನು ಬೆಳೆಸಬೇಕು. ಹಾಗೂ ಜಾನಪದ ಕಲೆಯನ್ನು ಪ್ರೋತ್ಸಾಹಿಸುವುದು, ಜಾನಪದ ಪದಕೋಶ ಹಾಗೂ ಜಾನಪದ ಕಲಾವಿದರ ದಾಖಲಾತಿಯೊಂದಿಗೆ ಮಾಹಿತಿ ಕೋಶ ಹೊರತರುವುದು ಬಹಳ ಪ್ರಮುಖವಾದ ಕೆಲಸವಾಗಿದೆ ಎಂದಿದ್ದಾರೆ.