×
Ad

ಮಡಿಕೇರಿ: ಜು.30 ರಂದು ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ

Update: 2017-07-22 16:17 IST

ಮಡಿಕೇರಿ, ಜು.22: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇದೇ ಜು.30ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಕ್ಷೇತ್ರಗಳಿಗೆ ಆಯ್ಕೆಯಾಗಿರುವ ಸಂಘದ ಸದಸ್ಯರನ್ನು ಹಾಗೂ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ಸಂಘದ ಸದಸ್ಯರುಗಳಾದ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಭಾಜನರಾದ ಐತಿಚಂಡ ರಮೇಶ್ ಉತ್ತಪ್ಪ ಹಾಗೂ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಬಲಿಜ ಸಮಾಜದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಎಲ್. ಶ್ರೀನಿವಾಸ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಎಸ್. ಮಹೇಶ್, ಸೋಮವಾರಪೇಟೆ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷರಾಗಿರುವ ಬಿ.ಎ. ಭಾಸ್ಕರ್, ಸೋಮವಾರಪೇಟೆ ಹೋಬಳಿ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎ.ಮುರಳೀಧರ್, ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ನಿರ್ದೇಶಕಿಯಾಗಿರುವ ಬಿ.ಆರ್. ಸವಿತಾರೈ, ಕೊಡವ ತಕ್ಕ್‌ಎಳ್ತ್ ಕಾರಡ ಕೂಟದ ಅಧ್ಯಕ್ಷರಾಗಿರುವ ಚೆಟ್ಟಂಗಡ ರವಿಸುಬ್ಬಯ್ಯ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾಗಿರುವ ಎಚ್.ಟಿ.ಅನಿಲ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರುಗಳನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.

ಒಂದನೇ ತರಗತಿಯಲ್ಲಿ ಅಂಕಗಳಿಸಿದ ಪಳೆಯಂಡ ಪಾರ್ಥಚಿಣ್ಣಪ್ಪ ಅವರ ಪುತ್ರಿ ಪಿ.ಸಿ.ಕಾಜಲ್, ಎರಡನೇ ತರಗತಿಯಲ್ಲಿ ಕುಡೆಕಲ್ ಸಂತೋಷ್ ಅವರ ಪುತ್ರ ಕೆ.ಎಸ್. ನಿಹಾಲ್, ಎ.ಎನ್.ವಾಸು ಆಚಾರ್ಯ ಅವರ ಪುತ್ರಿ ಎ.ವಿ. ಸಮೃದ್ಧಿ, ಆನಂದ್ ಕೊಡಗು ಅವರ ಪುತ್ರಿ ಬಿ.ಎ.ಇಂಚರ, ಅಲ್ಲಾರಂಡ ವಿಠಲ್ ನಂಜಪ್ಪ ಅವರ ಪುತ್ರ ಎ.ಪಿ. ರಸಜ್ಞ ಮಾದಪ್ಪ. ಎನ್.ಎ.ಅಶ್ವಥ್ ಕುಮಾರ್ ಅವರ ಪುತ್ರ ಎನ್. ಎ.ಬೆನಕ್, 6ನೇ ತರಗತಿಯಲ್ಲಿ ಕುಡೆಕಲ್ ಗಣೇಶ್ ಅವರ ಪುತ್ರಿ ಕೆ.ಜಿ.ಶಿವಾನಿ, ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ ಅವರ ಪುತ್ರಿ ಎ.ಪಿ.ಇಂಚಲ್, ಏಳನೇ ತರಗತಿಯಲ್ಲಿ ಬಿ.ಸಿ.ದಿನೇಶ್ ಅವರ ಪುತ್ರಿ ಬಿ.ಡಿ. ಮಧುರ, 8ನೇ ತರಗತಿಯಲ್ಲಿ ಪಾರ್ಥಚಿಣ್ಣಪ್ಪ ಅವರ ಪುತ್ರಿ ಪಿ.ಸಿ.ಕೋಯಲ್, ದ್ವಿತೀಯ ಬಿ.ಕಾಂನಲ್ಲಿ ಕುಂದೈರಿರ ರಮೇಶ್ ಅವರ ಪುತ್ರಿ ಕೆ.ಆರ್.ಸುಷ್ಮಾ, ಇಂಜಿನಿಯರಿಂಗ್ ದ್ವಿತೀಯ ಸೆಮಿಸ್ಟರ್‌ನಲ್ಲಿ ಬಿ.ಆರ್. ಸವಿತಾ ರೈ ಅವರ ಪುತ್ರಿ ಪ್ರಾರ್ಥನಾ ಎಂ.ಜೆ. ಅವರುಗಳನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಾರ್ಥಚಿಣ್ಣಪ್ಪ, ಖಜಾಂಚಿ ಸವಿತಾರೈ, ರಾಷ್ಟ್ರೀಯ ಸಮಿತಿ ಸದಸ್ಯ ಲೋಕೇಶ್ ಸಾಗರ್, ರಾಜ್ಯ ಸಮಿತಿ ಸದಸ್ಯರುಗಳಾದ ಅನುಕಾರ್ಯಪ್ಪ, ಎಸ್.ಎ ಮುರಳೀಧರ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News