×
Ad

ವಿದ್ಯಾರ್ಥಿಗಳಿಗಾಗಿ, ‘‘ರೇಲ್ವೇ ಸ್ಟೇಶನ್ ಮಾಹಿತಿ ಕಾರ್ಯಗಾರ’

Update: 2017-07-22 18:28 IST

ಭಟ್ಕಳ, ಜು.22: ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರದ ವತಿಯಿಂದ, ಸಂಸ್ಥೆಯ ‘‘ನಿರಂತರ ಶಿಕ್ಷಣ ಯೋಜನೆ’ ಯಡಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ, ‘‘ರೇಲ್ವೇ ಸ್ಟೇಶನ್ ಮಾಹಿತಿಕಾರ್ಯಗಾರ’ವನ್ನು ಮುರ್ಡೇಶ್ವರದ ಕೊಂಕಣರೇಲ್ವೆ ಸ್ಟೇಶನ್ ನಲ್ಲಿ ಏರ್ಪಡಿಸಲಾಗಿತ್ತು.

ಸಂಸ್ಥೆಯಒಂದು ಭಾಗದ 40 ವಿದ್ಯಾರ್ಥಿಗಳನ್ನು ರೇಲ್ವೆ ಸ್ಟೇಶನ್‌ಗೆಕರೆದುಕೊಂಡು ಹೋಗಿ, ಅಲ್ಲಿನ ವೇಳಾಪಟ್ಟಿ, ಟಿಕೇಟ್ ಪಡೆಯುವ ಸ್ಥಳ, ವಾಹನಗಳ ನಿಲುಗಡೆಯ ಸ್ಥಳ ಮುಂತಾದವುಗಳನ್ನು ಅವರಿಗೆ ಪರಿಚಯಿಸಿ, ಸ್ಟೇಶನ್ ಮಾಸ್ಟರ್ ನ್ನು ಸಂಪರ್ಕಿಸಿ, ಬಂದು ಹೋಗುವ ರೈಲುಗಳ ಸಂಪುರ್ಣ ಮಾಹಿತಿ ಹಾಗೂ ಸ್ಟೇಶನ್‌ನಲ್ಲಿ ಅವುಗಳ ನಿಯಂತ್ರಣ, ನಿರ್ವಹಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ನಂತರ ರೇಲ್ವೆ ನಿಯಂತ್ರಣಕೊಠಡಿ, ಬ್ಯಾಟರಿಕೊಠಡಿ, ಪ್ರಯಾಣಕರ ವಿಶ್ರಾಂತಿ ಪಡೆಯುವ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನುರೇಲ್ವೆಯ ಉತ್ಸುಕ ಸಿಬ್ಬಂದಿಗಳು ತಿಳಿಸಿಕೊಟ್ಟರು. ಅದೇ ವೇಳೆಯಲ್ಲಿ ಬೆಂಗಳೂರಿನಿಂದ ಕಾರವಾರಕ್ಕೆ ಬರುವ ರೈಲು ಮುರ್ಡೇಶ್ವರದಲ್ಲಿ ನಿಂತಾಗ, ಎಲ್ಲಾ ವಿದ್ಯಾರ್ಥಿಗಳಿಗೆ ರೇಲ್ವೆ ಭೋಗಿಗಳ ಪರಿಚಯವನ್ನುರೇಲ್ವೆ ಅಧಿಕಾರಿಗಳು ಮಾಡಿಕೊಟ್ಟರು. ನಂತರ ಬಂದ ರೇಲ್ವೆ ಗೂಡ್ಸ್‌ಗಾಡಿ ಮುರ್ಡೇಶ್ವರದಲ್ಲಿ ನಿಂತಾಗ, ಕೊಂಕಣರೇಲ್ವೆಯ ಮುಖಾಂತರ ಸರಕು ಸಾಗಾಣಕೆಯ ವ್ಯವಸ್ಥೆಗಳ ಮಾಹಿತಿಯನ್ನು ನೀಡಲಾಯಿತು.

ಸಂಸ್ಥೆಯ ಆಡಳಿತ ಧರ್ಮದರ್ಶಿಎಸ್.ಎಸ್. ಕಾಮತ್, ಸಂಸ್ಥೆಯ ಯೋಜನಾ ನೀರ್ದೇಶಕಿಯರಾದ ಆಶಾ ಕಾಮತ್, ಸಂಸ್ಥೆಯ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಭಾರತೀಯರೇಲ್ವೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News