×
Ad

ಮಕ್ಕಳ ಚಲನ ಚಿತ್ರೋತ್ಸವಕ್ಕೆ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಚಾಲನೆ

Update: 2017-07-22 18:47 IST

ಚಿಕ್ಕಮಗಳೂರು, ಜು.22:  ಚಲನ ಚಿತ್ರಗಳ ವೀಕ್ಷಣೆಯ ಸಂದರ್ಭದಲ್ಲಿ ಬರುವಂತಹ ಉತ್ತಮ ಅಂಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ ತಿಳಿಸಿದರು.

ಅವರು ನಗರದ ಗುರುನಾಥ ಚಿತ್ರಮಂದಿರದಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಲನ ಚಿತ್ರ ಚಿಕ್ಕಬಳ್ಳಾಪುರ ಸಹಯೋಗದೊಂದಿಗೆ ಆಯೋಜಿಸಿದ ಮಕ್ಕಳ ಚಲನ ಚಿತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿನಿಮಾಗಳು ಕೇವಲ ಮನೋರಂಜನೆಯನ್ನಷ್ಟೆ ನೀಡುವುದಿಲ್ಲ. ಅವು ಜನಸಾಮಾನ್ಯರ ದೈನಂದಿನ ಬದುಕಿನ ಶೈಲಿ, ನಡೆ ಮತ್ತಿತರ ಅಂಶಗಳನ್ನು ಒಳಗೊಂಡಿರುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸಿನಿಮಾವನ್ನು ಕಣ್ಣಿನಿಂದ ನೋಡಿದಾಗ ಅವು ಮನೋರಂಜನೆಯನ್ನಷ್ಟೇ ನೀಡುತ್ತವೆ. ಕೆಲವು ಸಿನಿಮಾದಲ್ಲಿ ಕೆಲವು ಪಾತ್ರಗಳನ್ನು ತಾವೇ ಅನುಭವಿಸುತ್ತ್ತಿದ್ದೇವೆಂದು ಭಾವಿಸಿದಾಗ ಅವು ಜೀವನಕ್ಕೆ ಒಳ್ಳೆ ಸಂದೇಶ ಹಾಗೂ ಮಾರ್ಗದರ್ಶನ ನೀಡುತ್ತವೆ ಎಂದರು.
 ಉದ್ಘಾಟನಾ ಸಮಾರಂಭದ ನಂತರ ಅರಿವು ಚಲನ ಚಿತ್ರವನ್ನು ಪ್ರದರ್ಶಿಸಲಾಯಿತು.  ಸಭೆಯಲ್ಲಿ ಮಿಲನ ಚಿತ್ರಮಂದಿರದ ವ್ಯವಸ್ಥಾಪಕ ಮಂಜುನಾಥ್, ರಾಜು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಲ್ಲಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಸಿಆರ್‌ಪಿ ಪುನಿತ್ ಮತ್ತಿತರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News