×
Ad

ಬೆಂಕಿ ಹಚ್ಚುತ್ತೇನೆ ಎನ್ನುವ ಶಬ್ಧಕ್ಕಿಂತ ರಕ್ತ, ಕಚಡ ಎಂಬ ಶಬ್ಧ ಕೆಟ್ಟದ್ದಲ್ಲ: ಮಧು ಬಂಗಾರಪ್ಪ

Update: 2017-07-22 20:14 IST

ಸೊರಬ, ಜು.22: ಬೆಂಕಿ ಹಚ್ಚುತ್ತೇನೆ ಎನ್ನುವ ಶಬ್ಧಕ್ಕಿಂತ ರಕ್ತ, ಕಚಡ ಎಂಬ ಶಬ್ಧ ಕೆಟ್ಟದ್ದಲ್ಲ. ದೃಶ್ಯಮಾದ್ಯಮದಲ್ಲಿ ನಾನು ಆಡಿದ ಮಾತಿನ ಅರ್ಧವನ್ನು ಮಾತ್ರ ತೋರಿಸಿದ್ದು, ನಾನು ಆಡಿದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಶಾಸಕ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೊಷ್ಠಿಂಯನ್ನುದ್ದೇಶಿಸಿ ಮಾತನಾಡಿ, ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆಯವರು ಮೋದಿಯವರ ಅಲೆಯಲ್ಲಿ ಗೆದ್ದು ಬಂದವರಾಗಿದ್ದು, ಜನಪ್ರತಿನಿಧಿಗಳಾಗಿ ತಮ್ಮ ಜವಬ್ದಾರಿಯನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.
ಯಾವಾಗಲೂ ರಕ್ತದಿಂದ ಬರೆದುಕೊಡುತ್ತೇನೆ ಎಂದು ಬೊಬ್ಬೆ ಹೊಡಿಯುವ ಬಿಎಸ್‌ವೈ ಸೇರಿದಂತೆ ಕುಮಾರ ಬಂಗಾರಪ್ಪ ತಮ್ಮ ಅಧಿಕಾರಾವಧಿಯಲ್ಲಿ ತಾಲೂಕಿಗೆ ಏಕೆ ನೀರಾವರಿ ಯೋಜನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಒಬ್ಬ ಮಹಿಳಾ ಜನಪ್ರತಿನಿಧಿಯಾದ ಶೋಭಾ ಕರಂದ್ಲಾಜೆ ಷಂಡರು ಎಂಬ ಪದವನ್ನು ಬಳಸಿರುವುದು ಎಷ್ಟರ ಮಟ್ಟಿಗೆ ಸರಿ. ಅವರು ಐಎನ್‌ಎ ಗೆ ಬರೆದ ಪತ್ರದಲ್ಲಿರುವ 22 ಪ್ರಕರಣಗಳಲ್ಲಿ ಈಗಾಗಲೇ 15-20 ಪ್ರಕರಣಗಳ ತನಿಖೆ ಮುಗಿದೆ ಹೋಗಿವೆ. ಇನ್ನುಳಿದ ಕೆಲವು ಸುಪಾರಿ ಮತ್ತು ಅಪಘಾತದ ಪ್ರಕರಣಗಳಾಗಿವೆ. ಕೇವಲ 6 ರಿಂದ 8 ಪ್ರಕರಣಗಳು ಕೋಮುಗಲಭೆಯದ್ದಾಗಿದ್ದು, ಮುಸಲ್ಮಾನರಿಗೆ ಸಂಬಂಧಪಟ್ಟ ಯಾವುದೇ ಒಂದು ಪ್ರಕರಣ ಇದರಲ್ಲಿ ಇರುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಚುನಾವಣಾ ಸಮಯದಲ್ಲಿ  ಕೋಮು ಭಾವನೆ ಕೆರಳಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಠಕರವಾಗಿದೆ. ರಾಜ್ಯ ಸರ್ಕಾರವು ಸಹ ಇದನ್ನು ನಿಯಂತ್ರಿಸಲು ವಿಫಲವಾಗಿದೆ. ಸಮನ್ವಯ ಸಮಿತಿ ಸಭೆಯನ್ನು ನಡೆಸಲು ಹಿಂದೆೀಟು ಹಾಕುತ್ತಿರುವುದು ಖಂಡನೀಯ ಎಂದರು.

ಮಹಾದಾಯಿ ಮತ್ತು ಕಳಸಾ ಬಂಡೂರಿ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧೀಕರಣಗಳು ಹೊರಗಡೆ ಮಾತುಕತೆ ನಡೆಸಲು ಸೂಚನೆ ನೀಡಿದ್ದರೂ ಬಿಜೆಪಿಯವರು ದೀನದಯಾಳ್ ಬರ್ತಡೇ ಮಾಡುತ್ತಿದ್ದಾರೆ. ಸಂಸದರು ಹಾಗೂ ನರೇಂದ್ರ ಮೋದಿಯವರು ಈ ಬಗ್ಗೆ ಗಮನ ಹರಿಸಿಲ್ಲ. ಮಾತುಕತೆ ಮೂಲಕ ಮಹಾದಾಯಿ ಸಮಸ್ಯೆ ಇತ್ಯರ್ಥಗೊಳಿಸಬೇಕೆಂಬ ಇಚ್ಚೆ ಗೋವಾ ರಾಜ್ಯಕ್ಕೂ ಇಲ್ಲದಾಗಿದೆ ಎಂದು ಆರೋಪಿಸಿದರು. ಸೊರಬ ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ತಮ್ಮಿಂದ ಯಾವ ಲೋಪವೂ  ಆಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದ ಲೋಪದಿಂದಾಗಿ ರಸ್ತೆ ವಿತರಣೆ ವಿಳಂಬವಾಗಿದೆ. ಇದಕ್ಕೆ ಜಿಲ್ಲಾಡಳಿತ ಹೊಣೆ ಹೊರತು ನಾನಲ್ಲ ಎಂದರು.

ಜಿಪಂ ಸದಸ್ಯ ಶಿವಲಿಂಗೇಗೌಡ, ತಾಪಂ ಉಪಾಧ್ಯಕ್ಷ ಸುರೇಶ ಹಾವಣ್ಣ, ಎಚ್. ಗಣಪತಿ, ಎಂ.ಡಿ. ಶೇಖರ್, ಭರಮಪ್ಪಗೌಡ ಪಾಟೀಲ್ ಎಣ್ಣೇಕೊಪ್ಪ, ಕೆ. ಅಜ್ಜಪ್ಪ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News