ಉಚಿತ ಕೃತಕ ಕಾಲು ಜೋಡಣಾ ಶಿಬಿರ
ಮಡಿಕೇರಿ, ಜು.23: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ 5ನೇ ವರ್ಷದ ಉಚಿತ ಕೃತಕ ಕಾಲು ಜೋಡಣಾ ಶಿಬಿರ ನಡೆಯಿತು.
ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ರೋಟರಿ ಸಹಾಯಕ ರಾಜ್ಯಪಾಲ ಮಹೇಶ್ ಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರೋಟರಿ ಕೋಯಮತ್ತೂರು ಹಾಗೂ ಆಸ್ಟ್ರೇಲಿಯ ಸಂಸ್ಥೆಯ ಸಹಕಾರದೊಂದಿಗೆ ಪ್ರತಿ ವರ್ಷ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು, ನೂರಾರು ಮಂದಿ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಶಿಬಿರದ ಅಧ್ಯಕ್ಷ ಪ್ರೇಮ್‌ದಾಸ್ ಮಾತನಾಡಿ, ಕೃತಕ ಕಾಲು ಜೋಡಣೆಗೆ ವ್ಯಕ್ತಿಯೊಬ್ಬರಿಗೆ 4 ರಿಂದ 5 ಸಾವಿರ ರೂಗಳು ವೆಚ್ಚವಾಗಲಿದೆ. ಕಳೆದ 5 ವರ್ಷಗಳಲ್ಲಿ 250 ಮಂದಿ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ 30 ಕ್ಕೂ ಅಧಿಕ ಮಂದಿ ಫಲಾನುಭವಿಗಳು ಪಾಲ್ಗೊಂಡಿದ್ದರು.
ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಜಿ.ಪ್ರಕಾಶ್, ಕಾರ್ಯದರ್ಶಿ ಸಿ.ಬಿ.ಹರೀಶ್, ಸಮುದಾಯ ಸೇವೆ ನಿರ್ದೇಶಕ ರವೀಂದ್ರ ರೈ, ಕೋಯಮತ್ತೂರಿನ ತಂತ್ರಜ್ಞರಾದ ಶಿಬು, ಕುಮರೇಸನ್ ಸೇರಿದಂತೆ ರೋಟರಿ ಪದಾಧಿಕಾರಿಗಳು ಹಾಜರಿದ್ದರು.