ವಿಜಯ ಬ್ಯಾಂಕಿಗೆ 254.69 ಕೋಟಿ ರೂ. ನಿವ್ವಳ ಲಾಭ

Update: 2017-07-23 12:49 GMT

ಬೆಂಗಳೂರು, ಜು. 23: ವಿಜಯ ಬ್ಯಾಂಕ್ ತನ್ನ ತ್ರೈ ಮಾಸಿಕ ವಹಿವಾಟಿನಲ್ಲಿ ಒಟ್ಟು 254.69 ಕೋಟಿ ರೂ. ನಿವ್ವಳ ಲಾಭ ಗಳಿಸಿ ತನ್ನ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶೋರ್ ಸಾನ್ಸಿ ತಿಳಿಸಿದ್ದಾರೆ.

 ಶನಿವಾರ ನಗರದ ವಿಜಯಾ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರೈ ಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದರು. ನಿವ್ವಳ ಬಡ್ಡಿ ಆದಾಯದಲ್ಲಿ ಶೇ.20.59 ಏರಿಕೆಯಾಗಿದ್ದು, ಇತರೆ ಸಾಮಾನ್ಯ ಆದಾಯದಲ್ಲಿ ಶೇ.114.49 ರಷ್ಟು ಪ್ರಗತಿ ಸಾಧಿಸಿದೆ. ಜೂನ್ ತಿಂಗಳ ಅಂತ್ಯಕ್ಕೆ ಸೇ.57.55ರಷ್ಟು ಲಾಭ ಹೆಚ್ಚಾಗಿದೆ ಎಂದರು.

ಚಾಲ್ತಿ ಖಾತೆ ಠೇವಣಿಯಲ್ಲಿ ಶೇ.34.42ರಷ್ಟು ಹೆಚ್ಚಳ, ಬಿಡಿ ಸಾಲದಲ್ಲಿ ಶೇ.22.80ರಷ್ಟು ಹಾಗೂ ಗೃಹ ಸಾಲದಲ್ಲಿ ಶೇ.26.41ರಷ್ಟು ಏರಿಕೆಯಾಗಿದೆ.ಚಾಲ್ತಿ ಮತ್ತು ಉಳಿತಾಯ ಖಾತೆಗಳ ಠೇವಣಿಯಿಂದ ಒಟ್ಟು 36,318 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1,868 ವಿಜಯ ಬ್ಯಾಂಕ್ ಶಾಖೆಗಳಿಂದ 2,030ಕ್ಕೆ ಹೆಚ್ಚಿಸಲಾಗಿದೆ. ಇದರ ಜೊತೆಗೆ 2.044 ಎಟಿಎಂಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕರಾದ ಬಿ.ಎಸ್.ರಾಮಾರಾವ್, ವೈ.ನಾಗೇಶ್ವರ್‌ರಾವ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News