ಬಂಡವಾಳಶಾಹಿಗಳು ಸರ್ಕಾರಗಳ ಮೇಲೆ ಒತ್ತಡ ಹೇರುತ್ತಾರೆ: ಜಿ.ಸಿ.ಬೈಯಾರೆಡ್ಡಿ

Update: 2017-07-23 12:55 GMT

ಮಾಲೂರು, ಜು.23: ಬಂಡವಾಳಶಾಹಿಗಳು ತಮ್ಮ ಹಿತಾಸಕ್ತಿಗಾಗಿ ಸರ್ಕಾರಗಳ ಮೇಲೆ ಒತ್ತಡ ಹೇರುವುದರ ಮೂಲಕ ತಮ್ಮ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳುತ್ತಾರೆ ಎಂದು ಕೆಪಿಆರ್‌ಎಸ್ ರಾಜ್ಯಾಧ್ಯಕ್ಷ ಜಿ.ಸಿ.ಬೈಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ತಾಲೂಕಿನ ಸಂತೇಹಳ್ಳಿ ಬಳಿಯಮೈಲಾಂಡಹಳ್ಳಿ ಲಕ್ಷ್ಮಣಗೌಡರ ತೋಟದಲ್ಲಿ ಹಮ್ಮಿಕೊಂಡಿದ್ದ ಕೆಪಿಆರ್‌ಎಸ್‌ನ ತಾಲೂಕು ಮಟ್ಟದ ಅಧ್ಯಾಯನ ಶಿಬಿರದಲ್ಲಿ ಮಾತನಾಡಿದರು.

ಬಂಡವಾಳ ಶಾಹಿಗಳು ಸಂಘಟಿತರಾಗಿ ತಮ್ಮ ಹಿತಾಸಕ್ತಿಗಾಗಿ ಸರ್ಕಾರಗಳ ಮೇಲೆ ಹಿಡಿತ ಸಾಧಿಸುತ್ತಾರೆ. ನಿರಂತರ ಸಮಸ್ಯೆಗಳನ್ನು ಅನುಭವಿಸುವ ಹಾಗೂ ಕೃಷಿಯಲ್ಲಿ ತೊಡಗಿರುವ ರೈತಾಪಿ ಜನರು ಸಂಘಟಿತರಾಗದೆ ಸಮಸ್ಯೆಗಳನ್ನು ಪರಿಹಾರಿಸಿಕೊಳ್ಳವುದು ಅಸಾಧ್ಯ. ಸಂಘಟನೆಯು 1936ರಲ್ಲಿ ಸ್ವಾತಂತ್ರ್ಯ ಚಳುವಳಿಯ ಜೊತೆಗೆ ರೈತರ ಸ್ವಾವಲಂಭಿ ಬದುಕಿಗಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕೆಪಿಆರ್‌ಎಸ್. ಕಳೆದ 60ವರ್ಷಗಳಿಂದ ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ಮಟ್ಟದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘವು ರಾಜ್ಯಮಟ್ಟದಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಹೋರಾಟಗಳನ್ನು ರೂಪಿಸಲಾಗುತ್ತಿದೆ ಎಂದರು. ರೈತರು ಕೆಪಿಆರ್‌ಎಸ್ ಜೊತೆಗೂಡಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗೋಣ ಎಂದರು.

ಪ್ರಗತಿಪರ ರೈತ ಎಸ್.ಟಿ.ನಾರಾಯಣಪ್ಪ, ಹುಳದೇನಹಳ್ಳಿ ನಾಗೇಶ್, ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಆನೇಪುರ ದೇವರಾಜ್, ಟಿ.ಎಂ.ವೆಂಕಟೇಶ್, ಕೋಲಾರ ತಾಲೂಕು ಅಧ್ಯಕ್ಷ ಕುರ್ಕಿ ದೇವರಾಜ್, ಅರಳೇರಿ ಮುನಿಶಾಮಿಗೌಡ, ಪಿ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಗುಡ್ನಹಳ್ಳಿ ರಾಜಕುಮಾರ್, ಕೆ.ಬಿ.ಈರಪ್ಪ, ಕೆಂಚೇಗೌಡ, ಸಿ.ಐಟಿಯು ಚಲಪತಿ, ಆಶೋಕ್, ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News