×
Ad

ಮಡಿಕೇರಿ: ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

Update: 2017-07-24 17:20 IST

ಸುಂಟಿಕೊಪ್ಪ, ಜು.24: ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ವಿಟ್ಲದ ಮಾಜಿ ಶಾಸಕ ಹಾಗೂ ಜಾಮಿಯ ನೂರಿಯಾ ಜೂನಿಯರ್ ಶರೀಯತ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಎಂ.ಇಬ್ರಾಹಿ ಮಾಸ್ಟರ್ ಅವರು ಶಾಲು ಹೊದಿಸಿ, ಸನ್ಮಾನಿಸಿ, ಬಿಳ್ಕೋಟರು.

ಸುಂಟಿಕೊಪ್ಪ ಜಾಮಿಯ ನೂರಿಯಾ ಜೂನಿಯರ್ ಶರೀಯತ್ ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿ ಎಂ.ಎಂ.ಅಬ್ಧುಲ್ಲಾ ಫೈಝಿ ನೇರವೇರಿಸಿದರು. ಪವಿತ್ರ ಹಜ್ ಯಾತ್ರೆಯನ್ನು ಕೈಗೊಂಡಿರುವ ಯಾತ್ರಾರ್ಥಿಗಳನ್ನು, ಹಜ್ ಯಾತ್ರೆಯ ಪುಣ್ಯ ಕರ್ಮದ ಪಾವಿತ್ರ್ಯತೆಯ ಬಗ್ಗೆ  ಕಾಲೇಜಿನ ಪ್ರಾಂಶುಪಾಲರಾದ ಜೈನುದ್ದೀನ್ ಫೈಝಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಎಂ.ಇಬ್ರಾಹಿ ರವರು ವಹಿಸಿದ್ದು, ಯಾತ್ರಾರ್ಥಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿ ಬಿಳ್ಕೋಟರು.


ಈ ಸಂದರ್ಭದಲ್ಲಿ ಜಬ್ಬಾರ್ ಹುದವಿ, ಇಕ್ಬಾಲ್ ಮೌಲವಿ, ಹಸನ್ ಕುಂಞ ಹಾಜಿ, ಸಫಾ ಮಹಮ್ಮದ್, ಮತ್ತಿತರರು ಹಾಜರಿದ್ದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಎಂ.ವೈ. ಆಶ್ರಫ್ ಫೈಜಿ ಪ್ರಾರ್ಥಿಸಿ, ಸ್ವಾಗತಿಸಿ, ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News