ಅನೇಕ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಅಸ್ತ್ರ: ಕಾಮಾಕ್ಷಮ್ಮ
ತುಮಕೂರು, ಜು.24: ಶಿಕ್ಷಣ ನಿತ್ಯ ಬದುಕಿನಲ್ಲಿ ಅತಿ ಮಹತ್ವವನ್ನು ಪಡೆದುಕೊಂಡಿದ್ದು, ಅನೇಕ ಸಮಸ್ಯೆಗಳಿಗೆ ಅಸ್ತ್ರವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿ.ವೈ.ಪಿ.ಸಿ,ಆರ್.ಎಂ.ಎಸ್.ಎ ಅಧೀಕ್ಷಕಿ ಕಾಮಾಕ್ಷಮ್ಮ ತಿಳಿಸಿದ್ದಾರೆ.
ನಗರದ ಗಾರ್ಡ್‌ನ್ ರಸ್ತೆಯಲ್ಲಿರುವ ಜಿಲ್ಲಾ ಸವಿತಾ ಸಮಾಜದ ಆರವಣದಲ್ಲಿ ಸವಿತ ಸ್ನೇಹ ಬಳಗದಿಂದ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಉತ್ತಮ ಮಾರ್ಗದರ್ಶನ, ಆತ್ಮ ವಿಶ್ವಾಸವನ್ನು ಶಿಕ್ಷಣದಿಂದ ಪಡೆದುಕೊಳ್ಳಲು ಸಾಧ್ಯ. ಹಾಗೆಯೇ ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಲು ಅರಿವು ಮೂಡಿಸುತ್ತದೆ. ವಿದ್ಯಾರ್ಥಿಗಳು ಪರಿಶ್ರಮ ಪಟ್ಟರೆ ಸಾಧನೆ ಮಾಡಲು ಪೂರಕವಾಗಿದೆ. ಇದಕ್ಕೆ ಮುಖ್ಯವಾಗಿ, ಪೋಷಕರು ಸಹ ಸಹಕರಿಸಿ,ಕಡ್ಡಾಯವಾಗಿ ಮಕ್ಕಳಿಗೆ, ಶಿಕ್ಷಣ ನೀಡಿ, ಮಕ್ಕಳಲ್ಲಿ ಸಂಕೋಚದ ಮನೋವೃತ್ತಿಯನ್ನು ಹೋಗಲಾಡಿಸ ಬೇಕು. ಹಾಗೆಯೇ ಯಾವುದೇ ವೃತ್ತಿಯಾಗಲಿ ಆ ವೃತ್ತಿಗೆ ಗೌರವಿಸಿದಾಗ ಬದುಕು ಸುಗಮವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ॥,ಉತ್ತಮ ಸಹಪಾಠಿಗಳಿಂದ ಉತ್ತಮ ಪರಿಸರವನ್ನು ರೂಪಿಸಿಕೊಂಡು, ಹೆಚ್ಚು ಹೆಚ್ಚು ಶಿಕ್ಷಣವನ್ನು ಪಡೆಯಲು ಸಹಕಾರಿಯಾಗುತ್ತದೆ.ಯಾವುದೇ ಘರ್ಷಣೆಗೆ ಒಳಗಾಗದೆ, ಪೋಷಕರಿಗೆ, ಶಾಲೆಗೆ ಸಮಾಜಕ್ಕೆ ಒಳ್ಳೆಯ ಹೆಸರನ್ನು ತರುವಂತಾಗಬೇಕು. ಇದರಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕಾಮಾಕ್ಷಮ್ಮ ನುಡಿದರು.
ಹಿಂದಿನ ಸಮಾಜಕ್ಕೂ ಈಗಿನ ಸಮಾಜಕ್ಕೂ ತುಂಬ ವ್ಯತ್ಯಾಸವಿದ್ದು, ಹಿಂದೆ ಶಿಕ್ಷಣವೆಂಬುದು ಅತಿ ಸಣ್ಣ ಸಮುದಾಯಗಳಿಗೆ ಮರೀಚಿಕೆಯಾಗಿತ್ತು. ಈಗ ನಾವೆಲ್ಲ ಶಿಕ್ಷಣದತ್ತ ಸಾಗುತ್ತಿದ್ದೇವೆ. ನಮ್ಮ ಸಮಾಜದ ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ದೊರೆಯುವಂತಾಗಬೇಕು. ಈ ರೀತಿಯಲ್ಲಿ ಶಿಕ್ಷಣ ದೊರೆತಿದ್ದೇ ಆದಲ್ಲಿ ಸಮಾಜದ ಅಭಿವೃದ್ದಿಯಾಗುತ್ತದೆ. ಸಮಾಜಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ನೇಹ ಬಳಗದ ಅಧ್ಯಕ್ಷರಾದ ವಿಶ್ವನಾಥ್, ಉಪಾಧ್ಯಕ್ಷರಾದ ರಮೇಶ್‌ಬಾಬು, ಜಿಲ್ಲಾಧ್ಯಕ್ಷರಾದ ಹೆಚ್.ವಿ.ಮಂಜೇಶ್‌ಗಾಂಧಿ, ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣ್, ತುಮಕೂರು ತಾಲೂಕು ಅಧ್ಯಕ್ಷರಾದ ಬಿ.ರಂಗನಾಥ್ (ಕಟ್‌ವೆಲ್), ತುಮಕೂರು ತಾಲ್ಲೂಕು ಪ್ರತಿನಿಧಿ ಎ.ಎಸ್.ಸುರೇಶ್, ವಾದ್ಯಗಾರರ ಸಂಘದ ಅಧ್ಯಕ್ಷರಾದ ಬಿ.ಗಂಗಾಧರ್ ಹಾಗೂ ಸವಿತಾ ಸಮಾಜದ ಮುಖಂಡರು ಭಾಗವಹಿಸಿದ್ದರು.