ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ನೊಂದಣಿ: ಬಿ.ಸುರೇಶಗೌಡ
ತುಮಕೂರು, ಜು.24: ಬೆಳೆ ನಷ್ಟ ಪರಿಹಾರ ಪ್ರಕೃತಿ ವಿಕೋಪದಡಿ ಹಾನಿ ಆದ ಬೆಳೆಗಳಿಗೆ ಪ್ರಧಾನಮಂತ್ರಿ ಬೀಮಾ ಯೋಜನೆಯಡಿ ವಿಮೆ ಕಂತು ಕಟ್ಟಿದ ರೈತರಿಗೆ ಬೆಳೆನಷ್ಟ ಮತ್ತು ಪ್ರಕೃತಿವಿಕೋಪದಡಿ ಬೆಳೆ ನಷ್ಟ ಆದರೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಎಕರೆವಾರು ವಿಮಾ ಮೊತ್ತ ಪಾವತಿ ಮಾಡಲಾಗುತ್ತದೆ. ದಯವಿಟ್ಟು ಎಲ್ಲ ರೈತರು ಕೂಡಾ ಬೆಳೆ ವಿಮೆ ಮಾಡಿಸುವಂತೆ ಶಾಸಕ ಬಿ.ಸುರೇಶಗೌಡ ರೈತರಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಹೆಬ್ಬೂರು ಗ್ರಾಮದ ಸಂತೆ ಮೈದಾನದಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅರಿವು ಮೂಡಿಸುವ ವಾಹನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಸುರೇಶಗೌಡ ಭಾಗವಹಿಸಿ ಮಾತನಾಡುತಿದ್ದ ಅವರು, ರಾಜ್ಯದಲ್ಲಿ ಈ ಬಾರಿಯೂ ಕೂಡಾ ಬರಗಾಲದ ಚಾಯೆ ಇದ್ದು, ರೈತ ತಾನು ಹದ ಮಾಡಿರುವ ಜಮೀನಿಲ್ಲಿ ಬೆಳೆ ಬಿತ್ತದೆ ಮಳೆರಾಯನಿಗಾಗಿ ಆಕಾಶದತ್ತ ಮುಖ ಮಾಡಿರುವ ಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ರೈತರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಗಿ ತೊಗರಿ ಹುರುಳಿ ಮತ್ತು ಹಲಸಚಿದೆ ಬಿತ್ತನೆ ಮಾಡಿದ್ದು ಮೊಳಕೆ ಹಂತದಲ್ಲೇ ಇದ್ದು ಮಳೆ ಇಲ್ಲದೆ ರೈತ ಕಂಗಾಲಾಗಿದ್ದಾನೆ ಎಂದು ಶಾಸಕ ಬಿ.ಸುರೇಶಗೌಡ ಆತಂಕ ವ್ಯಕ್ತಪಡಿಸಿದರು.
ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ರೈತರ ಕಷ್ಟ ಸುಖಗಳನ್ನು ಅರಿತಿರುವ ಮೋದಿ ಅವರು ವಿಶೇಷ ಯೋಜನೆಯನ್ನು 2017-18 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಜಾರಿಗೆ ತಂದಿದ್ದು,ರೈತರು ಹೆಚ್ಚು ಹೆಚ್ಚು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಬಿ.ಸುರೇಶಗೌಡ ಧೈರ್ಯ ತುಂಬಿದರು.
ಈ ವೇಳೆ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಹೊಳೆಕಲ್ಲು ನಾಗಾಣ್ಣ, ತಾ.ಪಂ.ಸದಸ್ಯ ಶಿವಕುಮಾರ್, ಮಧು, ಗ್ರಾ.ಪಂ.ಸದಸ್ಯ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.