×
Ad

ಗುಂಡ್ಲುಪೇಟೆ: ಹಕ್ಕು ಪತ್ರ , ಸಾಗುವಳಿ ಪತ್ರ ವಿತರಣಾ ಕಾರ್ಯಕ್ರಮ

Update: 2017-07-24 19:43 IST

ಗುಂಡ್ಲುಪೇಟೆ, ಜು.24: ಹಳ್ಳಿ ಜನರಿಗೆ ಪ್ರೋತ್ಸಾಹ ನೀಡಿದರೆ ಸಮಾಜದ ಮುಖ್ಯ ಬೆಳಕಿಗೆ ಹೊರಹೊಮ್ಮಲಿದ್ದಾರೆ ಎಂದು ಶಾಸಕಿ ಗೀತಾಮಹದೇವಪ್ರಸಾದ್ ಹೇಳಿದರು.

ತಾಲೂಕಿನ ಬೆಲಚಲವಾಡಿ ಗ್ರಾಮದಲ್ಲಿ ಕಂದಾಯ ಇಲಾಖೆವತಿಯಿಂದ 27 ಜನರಿಗೆ ಹಕ್ಕು ಪತ್ರ ಮತ್ತು 8 ಜನರಿಗೆ ಸಾಗುವಳಿ ಚೀಟಿ ವಿತರಣಾ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಜನರು ಹಲವು ವರ್ಷಗಳಿಂದ ಅನಧೀಕೃತವಾಗಿ ವಾಸ ಮತ್ತು ಉಳಿಮೆ ಮಾಡುತ್ತಿದ್ದರು. ಹಾಗಾಗಿ ಅವರಿಗೆ ಅಭದ್ರತೆ ಕಾಡುತ್ತಿತ್ತು. ವಾಸವಿರುವ ಜಾಗ ಭದ್ರತೆಯಿಂದ ಕೂಡಿದ್ದರೆ ಉತ್ತಮ ಚರಂಡಿ ನೀರಿನ ವ್ಯವಸ್ಥೆ, ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸೇರಿದಂತೆ ಅನೇಕ ಸರ್ಕಾರಿ ಯೋಜನೆಗಳು ಸಿಗಲಿದ್ದು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಆಗಮಿಸಿದ್ದಾಗ ಅನೇಕರು ಅಭದ್ರತೆಯ ನೆರಳಲ್ಲಿ ವಾಸಿಸುತ್ತಿರುವುದನ್ನು ಮನಗಂಡಿದ್ದೆ. ಹಾಗಾಗಿ ತಾಲೂಕು ದಂಡಾಧಿಕಾರಿಗಳಿಗೆ ಒತ್ತಡ ತಂದು ಮೂರು ತಿಂಗಳಲ್ಲಿ ಹಕ್ಕು ಪತ್ರ ನೀಡಿದ್ದೇನೆ ಜನರು ನೆಮ್ಮದಿಯಾಗಿರಬೇಕು ಎಂಬುದೇ ನನ್ನ ಬಯಕೆ ಎಂದು ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ಸಂಪೂರ್ಣವಾಗಿ ಮುಗಿದಿದ್ದು ಈಗಾಗಲೆ ಹಳ್ಳಿಗಳಲ್ಲಿ ಮೂಲ ನೀರಿನ ಪರೀಕ್ಷೆ ನಡೆಯುತ್ತಿದ್ದು ಆಗಸ್ಟ 1 ರಂದು ಕುಡಿಯಲು ಯೋಗ್ಯವಾದ ನೀರಿನ ಸರಬರಾಜು ಆಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News