ಉಚಿತ ಆರೋಗ್ಯ ತಪಾಸಣ ಶಿಬಿರ
ಹಾಸನ,ಜು.25: ಇಂದಿನ ದಿನಗಳಲ್ಲಿ ತಲೆದೂರಿರುವ ಡೆಂಗ್ ಎಂಬುದು ಮಾರಣಾಂತಿಕ ಖಾಯಿಲೆ ಆಗಿ ಪರಿಣಮಿಸಿದೆ ಎಂದು ಮಾಜಿ ಶಾಸಕ ಬಿ.ವಿ. ಕರೀಗೌಡ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ನಿಡೂಡಿ ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಮಂಡಲದಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಡೆಂಗ್ ಎಂಬುದು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಗುಣಮುಖರಾಗಬಹುದು ಎಂದು ಕಿವಿಮಾತು ಹೇಳಿದರು.
ಹಿರಿಯ ವೈದ್ಯ ನಾಗರಾಜು ಮಾತನಾಡಿ, ಮನೆಯ ಹಾಗೂ ಇತರೆ ಕಡೆಗಳಲ್ಲಿ ಇರುವ ಟೈರು, ತೊಟ್ಟಿ, ಡಬ್ಬಿ, ಇತರೆ ಸ್ಥಳಗಳಲ್ಲಿ ಮನೆ ಮುಂದೆ ನೀರು ನಿಲ್ಲಬಾರದು. ಯಾರಿಗಾದರೂ ಜ್ವರ ಬಂದಾಗ ಉದಾಸೀನ ಮಾಡದೆ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಡೆಂಗ್ ಬಗ್ಗೆ ನೀವೆ ನಿರ್ಧಾರ ಮಾಡಿಕೊಳ್ಳಬಾರದು, ಪರೀಕ್ಷೆ ವರದಿ ಬಂದ ನಂತರ ತೀರ್ಮಾನಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಹಿರಿಯ ಮುಖಂಡ ಕಮಲ್ ಕುಮಾರ್ ಮಾತನಾಡಿ, ಬಿಜೆಪಿ ಗ್ರಾಮಾಂತರ ಮಂಡಲದಿಂದ ನಗರದ ವಿವಿಧ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗಿದೆ. ಇದಕ್ಕೆ ಹಣವನ್ನು ಜನತೆಯಿಂದ ಕೇಳದೆ ಉಚಿತವಾಗಿ ಕೊಡಲಾಗುತ್ತಿದೆ. ಪರಿಸರವನ್ನು ಕಾಪಾಡಿ, ಮನೆ ಸುತ್ತ ನೀರು ನಿಲ್ಲದಂತೆ ನಿಗಾವಹಿಸಿದರೇ ಡೆಂಗ್ ನಿಂದ ದೂರ ಇರಬಹುದು ಎಂದು ಹೇಳಿದರು.
ಹುಡಾ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಪ್ರಾಸ್ತವಿಕವಾಕಿ ಮಾತನಾಡಿ, ಆರೋಗ್ಯ ಎಂಬುದು ಮನುಷ್ಯನಲ್ಲಿ ಮುಖ್ಯವಾಗಬೇಕು. ಯಾವ ಆಹಾರ ಸೇವಿಸಿದರೇ ಉತ್ತಮ ಎಂಬುದನ್ನು ಅರಿವು ಅಗತ್ಯ. ಆಯಾ ಸಮಯಕ್ಕೆ ತಕ್ಕ ಆಗೇ ಆರೋಗ್ಯ ತಪಾಸಣೆ ಮಾಡಿಡಿಕೊಳ್ಳುವುದು ಸೂಕ್ತ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಅಶೋಕ್ ಮಾತನಾಡಿ, ಕೇಂದ್ರ ಸರಕಾರದ ಸಾಧನೆಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ಅದರ ಪ್ರಯೋಜನ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ತಪಾಸಣೆಯನ್ನು ಏರ್ಪಡಿಸಿರುವುದು ಉತ್ತಮ ಎಂದರು.
ಜಿಲ್ಲಾ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್ ಮಾತನಾಡಿ, ನಿಡೂಡಿಯಲ್ಲಿ ರಾಜಕಾರಣ ಮಾಡಲು ಮತ್ತು ಮತ ಕೇಳುವ ಉದ್ದೇಶದಲ್ಲಿ ಇಂತಹ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿಲ್ಲ. ಇದೆ ಗ್ರಾಮದ ಯುವಕರು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಒತ್ತಾಯ ಮಾಡಿದ್ದರಿಂದ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಏರ್ಪಡಿಸಿರುವುದಾಗಿ ಹೇಳಿದರು.
ಉಚಿತ ಆರೋಗ್ಯ ತಪಾಸಣೆಯಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಜನಪ್ರಿಯ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಮಂಜುನಾಥ ಶರ್ಮ, ನಗರ ಉಪಾಧ್ಯಕ್ಷ ಲೋಕೇಶ್, ಬಿಟ್ಟಗೌಡನಹಳ್ಳಿ ಸುರೇಶ್, ರೋಹನ್ ಕುಮಾರ್, ರಾಘವೇಂದ್ರ, ರಾಗು ಇತರರು ಇದ್ದರು.