ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಕಲಾವಿದರ ಮಕ್ಕಳು
ಹಾಸನ,ಜು.25: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರದಲ್ಲಿ ಕಲಾವಿಧರ ಮಕ್ಕಳು ಸ್ವೀಕರಿಸಿದರು.
ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿಗೆ ಸದಸ್ಯರಾಗಿರುವ 20ಕ್ಕೂ ಹೆಚ್ಚು ಕಲಾವಿದರ ಮಕ್ಕಳು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 75ಕ್ಕಿಂತ ಹೆಚ್ಚು ಎಲ್ಲಾ ವಿಷಯಗಳಲ್ಲೂ ಅಂಕ ಪಡೆದವರು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು. ಇದೆ ವೇಳೆ ಜಾನಪದ ಗೀತೆ ಹಾಗೂ ಭಾವಗೀತೆ ಸ್ಪರ್ದೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನವನ್ನು ಕೂಡ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಕಲೆ ಎಂಬುದು ನಿಂತ ನೀರಲ್ಲ. ಅದು ನಿರಂತರವಾಗಿ ಇರುತ್ತದೆ. ಇಂದಿನ ಕಲಾವಿದರ ಪರಿಸ್ಥಿತಿ ಕಷ್ಟಕರವಾಗಿದೆ. ಆದರೂ ಅದರಲ್ಲೆ ಇದ್ದು, ಜೀವನ ಸಾಗಿಸುತ್ತಿರುವ ಇಂತಹ ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಸ್ವಾತಂತ್ರ ಹೋರಾಟಗಾರ ಹೆಚ್.ಎಂ. ಶಿವಣ್ಣ ಮಾತನಾಡಿ, ಹಾಸನ ಜಿಲ್ಲೆ ಎಂದರೇ ಕಲೆ, ಸಾಹಿತ್ಯ ಹಾಗೂ ಸಂಸ್ಕøತಿಗೆ ಪ್ರಸಿದ್ಧವಾಗಿದೆ. ದೇಶದ ಇತಿಹಾಸದಲ್ಲಿ ಜಿಲ್ಲೆ ತನ್ನದೆ ಆದ ಛಾಪು ಮೂಡಿಸಿದೆ ಎಂದರು. ಕಲಾವಿದರು ತಮ್ಮ ಕಲೆಯಲ್ಲೆ ಜೀವನವನ್ನು ಮಿಸಲಾಗಿಟ್ಟು ಮಕ್ಕಳಿಗೆ ಕಷ್ಟದ ಪರಿಸ್ಥಿತಿಯಲ್ಲೂ ಶಿಕ್ಷಣ ನೀಡಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಕೊಡುತ್ತಿರುವುದು ನೂತನವಾದ ಹೋಸ ಯೋಜನೆ ಆಗಿದೆ. ಈ ಮೂಲಕ ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಗಿನಿಂದ ಸಂಜೆವರೆಗೂ ಮಕ್ಕಳಿಗೆ ವಿವಿಧ ಸ್ಪರ್ದೆಯನ್ನು ಏರ್ಪಡಿಸಿದ್ದರು.
ಈ ವೇಳೆ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ರಂಗಪ್ಪದಾಸ್, ಅಧ್ಯಕ್ಷ ಯರಹಳ್ಳಿ ಮಂಜೇಗೌಡ, ಉಪಾಧ್ಯಕ್ಷ ಗ್ಯಾರಂಟಿ ರಾಮಣ್ಣ, ಖಜಾಂಚಿ ಶ್ರೀಕಂಠಪ್ಪ, ಕಸಾಪ ತಾಲೂಕು ಅಧ್ಯಕ್ಷ ಮಹಾಂತಪ್ಪ, ಹಿರಿಯ ರಂಗ ಕಲಾವಿದ ವೆಂಕಟಸುಬ್ಬಯ್ಯ, ಪ್ರೇಮಕುಮಾರ್, ಸಹ-ಕಾರ್ಯದರ್ಶಿ ಚೆಲುವನಹಳ್ಳಿ ಶೇಖರಪ್ಪ ಇತರರು ಪಾಲ್ಗೊಂಡಿದ್ದರು.