18ನೆ ದಿನಕ್ಕೆ ಕಾಲಿಟ್ಟ ಕೆರೆಯಂಗಳದ ಧರಣಿ

Update: 2017-07-25 15:01 GMT

ಮದ್ದೂರು, ಜು.25: ಕಾವೇರಿ ಕೊಳ್ಳದ ನಾಲೆಗಳಿಗೆ ನೀರುಹರಿಸಲು ಒತ್ತಾಯಿಸಿ ತಾಲೂಕಿನ ದೇಶಹಳ್ಳಿ ಕೆರೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ 18ನೆ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರ ನಡೆದ 17ನೆ ದಿನದ ಧರಣಿಗೆ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದಲಿತ ಸಂಘರ್ಷ ಸಮಿತಿ, ಮುಸ್ಲಿಂ ಬಳಗ, ವರ್ತಕರ ಸಂಘ, ಇತರ ಸಂಘಟನೆಗಳು ಬೆಂಬಲ ನೀಡಿದವರು. ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು  ಭೇಟಿನೀಡಿ ಬೆಂಬಲ ಸೂಚಿಸಿದರು. 

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶಗೌಡ ಮಾತನಾಡಿ, ಜು.27 ರಂದು ಕರೆನೀಡಿರುವ ಬೃಹತ್ ಪ್ರತಿಭಟನೆಗೆ ಜಾನುವಾರು ಸಮೇತ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಠಾಧೀಶರು, ಪ್ರಗತಿಪರ ಸಂಘಟನೆಗಳ ಮುಖಂಡರು, ಚಲನಚಿತ್ರ ಕಲಾವಿದರು, ಸಂಸದರು, ಜೆಡಿಎಸ್ ಶಾಸಕರು ಭಾಗವಹಿಸಲಿದ್ದು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಪುರ, ವರ್ತಕರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಸಿದ್ದೇಗೌಡ, ದಸಂಸ ಮುಖಂಡರಾದ ಅಂದಾನಿ ಸೋಮನಹಳ್ಳಿ, ರಾಜೇಶ್, ಶಿವು, ಮುಸ್ಲಿಂ ಮುಖಂಡರಾದ ಕಬೀರ್, ರಫೀಕ್, ವಳೆಗೆರೆಹಳ್ಳಿ ದಯಾನಂದ, ಚಾಮನಹಳ್ಳಿ ರಾಮಯ್ಯ, ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್, ತಿಪ್ಪೂರು ರಾಜೇಶ್, ಗುಂಡ ಮಹೇಶ್, ವಿನಯ್, ಲೋಕೇಶ್, ವೀರಪ್ಪ, ಚೆನ್ನಪ್ಪ, ಗೋಪಾಲಕೃಷ್ಣ, ಮಹೇಶ್, ಸ್ನೇಹಜೀವಿ ಬಳಗದ ಸದಸ್ಯರು, ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News