ಮುಂದಿನ ಕೆಡಿಪಿ ಸಭೆ ತನಕ ಪಂಚನಹಳ್ಳಿ ಗೋಶಾಲೆ ಮುಚ್ಚುವುದಿಲ್ಲ: ಆರ್.ರೋಷನ್ ಬೇಗ್

Update: 2017-07-25 15:05 GMT

ಚಿಕ್ಕಮಗಳೂರು, ಜು.25:  ಮುಂದಿನ ಪ್ರಗತಿ ಪರಿಶೀಲನಾ ಸಭೆಯ ತನಕ ಪಂಚನಹಳ್ಳಿ ಗೋಶಾಲೆಯನ್ನು ಮುಚ್ಚುವ್ಲುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ, ಹಜ್ ಸಚಿವ ರೋಷನ್ ಬೇಗ್ ಭರವಸೆ ನೀಡಿದರು.

ಅವರು ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಡಿಯುವ ನೀರಿಗೆ ನೀಡಿರುವ ವಿಶೇಷ ಅನುದಾನ ಹಣ ಬಿಡುಗಡೆಗೆ ಸೂಚಿಸಿದರು. ಹಾಗೂ ಅಮೃತ್ ಮಹಲ್ ಕಾವಲ್‍ನಲ್ಲಿ ಮೇವು ಬೆಳೆಯಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನ ಕಡೂರು ಶಾಸಕ ವೈಎಸ್‍ವಿ ದತ್ತಾ ಮಾತನಾಡಿ, ಕಡೂರು ತಾಲೂಕು ಸತತ 3 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿಲ್ಲ. ಕುಡಿಯುವ ನೀರಿಗೆ ಜಾನುವಾರು ಮೇವಿಗೆ ಹಾಹಾಕಾರ ಎದ್ದಿದೆ. ಪಂಚನಹಳ್ಳಿಯಲ್ಲಿ ಆರಂಭಿಸಿರುವ ಗೋಶಾಲೆಗೆ 90 ದಿನಗಳು ತುಂಬುತ್ತಿರುವುದರಿಂದ ಗೋಶಾಲೆ ಮುಚ್ಚುವ ಸುದ್ದಿ ಕೇಳುತ್ತಿದೆ. ರಾಜ್ಯಕ್ಕೆ ಮಾದರಿಯಾಗಿರುವ ಪಂಚನಹಳ್ಳಿ ಗೋಶಾಲೆಯನ್ನು ಮುಚ್ಚಬಾರದು. ಕುಡಿಯುವ ನೀರಿಗೆ ಸಿ.ಎಂ.ಸಿದ್ದರಾಮಯ್ಯನವರನ್ನು ಭೇಟಿ ಮಾಡಿ 3 ಕೋಟಿ ರೂ.ಗಳ ವಿಶೇಷ ಅನುದಾನ ತರಲಾಗಿದೆ. ಅಮೃತ ಮಹಲ್ ಕಾವಲ್‍ನಲ್ಲಿ ಮೇವು ಬೆಳೆಯಲು ಕ್ರಮಕೈಗೊಳ್ಳಬೇಕು ಎಂದು ಪಟ್ಟುಹಿಡಿದರು.

ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಮಸಗಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗಡಿ ಗುರುತು ಮಾಡಲು 30 ರಿಂದ 40 ಅಡಿ ಅಗಲದ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ರೈತರು ಬೆಳೆದ ಸಾವಿರಾರು ಕಾಫಿಗಿಡಗಳು ನಾಶ ಪಡಿಸುತ್ತಿದ್ದಾರೆ. ಈ ಭೂಮಿಯನ್ನು ಹಲವು ವರ್ಷಗಳ ಹಿಂದೆಯೇ ರೈತರ ಹೆಸರಿಗೆ ಮಂಜೂರಾಗಿದೆ. ಒತ್ತುವರಿ ಬಿಟ್ಟುಕೊಡಲು ರೈತರು ಒಪ್ಪಿದ್ದಾರೆ. ಫಸಲು ಕೊಯ್ಲು ಮಾಡುವವರೆಗಾದರು ಅರಣ್ಯ ಇಲಾಖೆ ಅವಕಾಶ ನೀಡಬೇಕೆಂದರು.

ಈ ವೇಳೆ ಸಚಿವ ರೋಷನ್ ಬೇಗ್ ಮದ್ಯ ಪ್ರವೇಶಿಸಿ ಮಾತನಾಡಿ, ಮಸಗಲಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜಂಟಿ ಸರ್ವೇ ಕಾರ್ಯ ನಡೆಸುವಂತೆ ಅರಣ್ಯಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಅಧಿಕಾರಿ ಸೀತಾ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಮಾನ ಆಧಾರಿತ ಮಿಮಾ ಯೋಜನೆ 5 ವರ್ಷಗಳ ಇಳವರಿ ಪ್ರಮಾಣವನ್ನು ಆಧಾರಿಸಿ ಪರಿಹಾರ ನೀಡಲಾಗುತ್ತದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸರ್ವೇ ಮಾಡಿ ವರದಿ ಇಶ್ಯೂರೆಸ್ ಕಂಪನಿಗೆ ನೀಡಲಾಗುತ್ತದೆ. ಇನ್ನೂ 10 ದಿನಗಳಲ್ಲಿ ಪೂರ್ತಿ ಹಣ ನೀಡುವುದಾಗಿ ವಿಮಾ ಕಂಪನಿ ತಿಳಿಸಿದ್ದಾಗಿ ಸಬೆಯ ಗಮನಕ್ಕೆ ತಂದರು.

‘ಫಸಲ್ ಭೀಮಾ ವಿಮಾ ಯೋಜನೆಯು ಬೋಗಸ್ ಕಂಪನಿ. 550 ಕೋಟಿ ಬೆಳೆ ಸಾಲದಲ್ಲಿ 1.31 ಕೋಟಿ ರೂ.ಗಳ ವಿಮಾ ಕಂಪನಿಗೆ ಪಾವತಿ ಮಾಡಲಾಗಿದೆ. ಜಿಲ್ಲೆಯ 26 ರೈತರಿಗೆ 3.96 ಲಕ್ಷ ರೂ.ಗಳು ಮಾತ್ರ ಬಿಡುಗಡೆಯಾಗಿದೆ. ಉಳಿದ ರೈತರ ಪಾಡೇನು? ವಿಮೆ ಕಡ್ಡಾಯವಾಗಿ ಕಟ್ಟಲೇ ಬೇಕು ಎಂದು ರೈತರಿಂದ ಕಟ್ಟಿಸಿಕೊಳ್ಳಲಾಗುತ್ತಿದೆ. ರೈತರು ಕಳೆದ ಬಾರಿ ಕಟ್ಟಿದ ವಿಮೆ ಪರಿಹಾರ ಇನ್ನೂ ಬಂದಿಲ್ಲ ನಾವು ಕಟ್ಟುವುದಿಲ್ಲ ಎನ್ನುತ್ತಾರೆ’

ಎಸ್.ಎಲ್. ಧಮೇಗೌಡ, ಅಧ್ಯಕ್ಷರು, ಜಿಲ್ಲಾ ಸಹಕಾರಿ ಬ್ಯಾಂಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News