×
Ad

ಹಳೆಮೂಡಿಗೆರೆ ಗ್ರಾಪಂ: ಅಧ್ಯಕ್ಷ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರ ಆಯ್ಕೆ

Update: 2017-07-26 18:24 IST

ಮೂಡಿಗೆರೆ, ಜು.26: ಹಳೆಮೂಡಿಗೆರೆ ಗ್ರಾಪಂ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಹೇಮಾವತಿ ಬೀಜುವಳ್ಳಿ, ಉಪಾಧ್ಯಕ್ಷರಾಗಿ ಶೀವಾನಂದ್ ಕುನ್ನಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ತಹಸೀಲ್ದಾರ್ ನಂದಕುಮಾರ್ ಬುಧವಾರ ಘೋಷಣೆ ಮಾಡಿದರು.

ಈ ಹಿಂದೆ ಸಬೀನ ಅದ್ಯಕ್ಷರಾಗಿ ಜುಬೇರ್ ಉಪಾದ್ಯಕರಾಗಿ ಕಾರ್ಯನಿರ್ವಹಿಸಿದ್ದು, ಅಧಿಕಾರ ಹಂಚಿಕೆ ಸೂತ್ರದಂತೆ 24 ತಿಂಗಳ ಅಡಳಿತದ ನಂತರ ಇವರು ರಾಜಿನಾಮೆ ನೀಡಿದ್ದಾರೆ. ಉಳಿದ ಅವಧಿಗೆ ಚುನಾವಣೆ ನಡೆದಿದ್ದು, ಹೇಮಾವತಿ ಹಾಗು ಶೀವನಂದ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
 

ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರು ಜನರ ಪ್ರೀತಿ ವಿಶ್ವಾಸ ಗಳಿಸುವಂತ ಕೆಲಸ ಮಾಡಬೇಕು. ಪ್ರಮುಖವಾಗಿ ಗ್ರಾಪಂ ಗಳಲ್ಲಿ ಸ್ವಚ್ಚತೆ, ಆರೋಗ್ಯ, ವಸತಿ, ಕುಡಿಯುವ ನೀರು, ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸುವತ್ತ ಗಮನ ಹರಿಸಬೇಕು. ಅಲ್ಲದೆ ಭ್ರಷ್ಟಾಚಾರ ರಹಿತ ಅಡಳಿತ ನಡೆಸಬೇಕು. ಬಡವರ ಕಷ್ಟ ಸುಖಕ್ಕೆ ಸ್ಪಂದಿಸುತ್ತಾ ಅವರ ಕೆಲಸಗಳನ್ನು ಮಾಡಿಕೊಟ್ಟರೆ ಜನರ ಮನಸ್ಸಿನಲ್ಲಿ ಉಳಿಯಲು ಸಾದ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

 ಗ್ರಾಪಂ ಸದಸ್ಯರಾದ ಕುಮಾರ, ಜುಬೇರ್, ಚಂದ್ರಪ್ರಸಾದ್, ಲೀಲಮ್ಮ, ತಾಲ್ಲೂಕು ಬಿಜೆಪಿ ಅದ್ಯಕ್ಷ ಪ್ರಮೋದ್, ಕಾರ್ಯದರ್ಶಿ ಮನೋಜ್ ಹಳೆಕೋಟೆ, ವಕ್ತಾರ ನಯನ ತಳವಾರ, ಎಸ್ಸೀ ಮೋರ್ಚಾ ಅದ್ಯಕ್ಷ ಜಯಪಾಲ್, ಪಂಚಾಕ್ಷರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News