×
Ad

ವಿದ್ಯಾರ್ಥಿಗಳಿಂದ ಬೃಹತ್‌ ತ್ರೀವರ್ಣ ಧ್ವಜ ಪ್ರದರ್ಶನ

Update: 2017-07-26 20:17 IST

ಭಟ್ಕಳ, ಜು.26: ಕಾರ್ಗಿಲ್ ವಿಜಯ ದಿವಸ್ ಸ್ಮರಣಾರ್ಥ ಇಲ್ಲಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬೃಹತ್‌ ತ್ರೀವರ್ಣ ಧ್ವಜವನ್ನು ಪ್ರದರ್ಶಿಸಿ ಕಾಲುನಡಿಗೆ ಜಾಥಾ ನಡೆಸಿದರು.

ಭಟ್ಕಳದ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀಗುರು ಸುಧೀಂದ್ರ ಕಾಲೇಜ್ ಹಾಗೂ ಸಿದ್ಧಾರ್ಥ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಶಮ್ಸುದ್ದೀನ್ ವೃತ್ತದ ಮೂಲಕ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದವರೆಗೆ ಕಾಲು ನಡಿಗೆ ಜಾಥಾದ ಮೂಲಕ ಬೃಹತ್‌ ತ್ರೀವರ್ಣ ಧ್ವಜವನ್ನು ಪ್ರದರ್ಶಿಸಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ವೀರಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಂತರ ಆಸರಕೇರಿ ವೆಂಕಟರಮಣ ಸಭಾಭವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಲಕ್ಷ್ಮಣ ಪೈ, ಸಿಪಿಐ ಸುರೇಶ್ ನಾಯಕ, ಪ್ರಕಾಶ್ ಮಲ್ಪೆ, ಪಾಂಡುರಂಗ ನಾಯ್ಕ, ಧನ್ಯಚಂದ್ರಜೈನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News