×
Ad

ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

Update: 2017-07-26 20:26 IST

ಗದಗ, ಜು.26: ನಗರದ ಸಿ.ಟಿ.ಎಸ್. ನಂ. 1577 ರ ಕ್ಲಾಥ ಮಾರ್ಕೆಟ್ ನಗರಸಭೆಯ ಮಾಲ್ಕಿ ಹಕ್ಕುಳ್ಳ ಆಸ್ತಿಯು ಭೂಬಾಡಿಗೆ ರೂಪದಲ್ಲಿ ಸುಮಾರು 3 ದಶಕಗಳಿಂದ ಒಂದೇ ಸಮುದಾಯಕ್ಕೆ ಸೇರಿದಂತೆ ಹಂಚಿಕೆ ಮಾಡಿ ನಗರಸಭೆ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಮಳಿಗೆಗಳಿಗೆ ಕೇವಲ 315 ರೂಗಳಿಗೆ ಪ್ರತಿ ತಿಂಗಳು ಭಾಡಿಗೆ ಪಡೆದು ಅಧಿಕಾರಿಗಳು ಭ್ರಷ್ಟಚಾರಿಗಳಾಗಿದ್ದಾರೆ. ಈ ಹಿಂದೆ ಬಹಿರಂಗ ಹರಾಜು ಮಾಡುವುದರ ಮೂಲಕ ಮೀಸಲಾತಿ ವರ್ಗಿಕರಿಸಿ ನಗರಸಭೆ ಮಳಿಗೆಗಳು ಹರಾಜು ಮಾಡುವಂತೆ ಮನವಿ ಸಲ್ಲಿಸಿದ್ದರೂ ಪೌರಾಯುಕ್ತರು, ನಗರಸಭೆಯ ಕಾಯ್ದೆ ಉಲ್ಲಂಘಿಸಿ ಈ ಹಿಂದೆ ಇರುವ ಬಾಡಿಗೆ ಮುಂದುವರೆಸಲು ನಿರ್ಧರಿಸಿದ್ದು ಖಂಡನೀಯವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ನಗರ ಹೃದಯ ಭಾಗದಲ್ಲಿರುವ ಮಳಿಗೆಗಳು ಒಂದು ವೇಳೆ ಬಹಿರಂಗವಾಗಿ ಹರಾಜು ಮಾಡಿದ್ದಲ್ಲಿ 315 ರೂ. ಬದಲು ಸುಮಾರು ತಿಂಗಳಿಗೆ ಪ್ರತಿ ಮಳಿಗೆಯಿಂದ 10 ಸಾವಿರ ರೂ. ನಗರಸಭೆಗೆ ಆದಾಯವಾಗುವ ಸಂಭವವಿದ್ದು, ಆರ್ಥಿಕತೆಯಿಂದ ಬೀದಿ ಮೇಲೆ ವ್ಯಾಪಾರ ಮಾಡುವ ಚಿಕ್ಕ ವ್ಯಾಪಾರಸ್ಥರು ಆರ್ಥಿಕತೆ ಸುಧಾರಿಸಲು ಅನುಕೂಲವಾಗುವ ದೃಷ್ಠಿಯಿಂದ ಮೀಸಲಾತಿ ವರ್ಗಿಕರಿಸಬೇಕೆಂದು ಬೀದಿಬದಿ ವ್ಯಾಪಾರಸ್ಥರು ಆಗ್ರಹಿಸಿದರು.

ನಗರಸಭೆಯ ಈ ಜಾಗ ಸೂಪರ ಮಾರ್ಕೆಟ್ ರೂಪದಲ್ಲಿ ತಯಾರಿಸಿದರೆ ರಸ್ತೆ ಬೀದಿ ವ್ಯಾಪಾರ ಮಾಡುವ ಎಲ್ಲ ವ್ಯಾಪಾರಸ್ಥರು ಮೊದಲನೆ ಮಹಡಿಯಲ್ಲಿ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ. 2ನೇ ಮಹಡಿ ಕ್ಲಾಥ ಮಾರ್ಕೆಟ್ ರೂಪಿಸಿ 3ನೇ ಮಹಡಿಯಲ್ಲಿ ಇತರೆ ಮಳಿಗೆಗಳು ಮಾಡಿದರೆ ನಗರಸಭೆಗೆ ಕೋಟ್ಯಾಂತರ ಆದಾಯ ಬರುವುದು. ನಗರದ ಹೃದಯ ಭಾಗದಲ್ಲಿರುವ ಹಾಗೂ ವಾಣಿಜ್ಯಕ್ಕೆ ಕೇಂದ್ರ ಬಿಂದುವಾದ ಸ್ಥಳ ಸಂಚಾರ ವ್ಯವಸ್ಥೆಗೆ ಗಮನದಲ್ಲಿಟ್ಟುಕೊಂಡು ಹಾಗೂ ಜಿಲ್ಲಾ ಪ್ರದೇಶವಿರುವುದರಿಂದ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸಾಮಾನ್ಯರು ವ್ಯಾಪಾರಕ್ಕಾಗಿ ಬರುತ್ತಿದ್ದು, ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಬೀದಿ ವ್ಯಾಪಾರಸ್ಥರ ಸಂಘದಿಂದ ಜಿಲ್ಲಾಧಿಕಾರಿ ಅವರಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭಾಷಾಸಾಬ ಮಲ್ಲಸಮುದ್ರ ಜಿಲ್ಲಾಧ್ಯಕ್ಷ ಅನ್ವರ ಶಿರಹಟ್ಟಿ, ಮಾರುತಿ ಸೋಳಂಕೆ, ಶಿವಾಜಿ, ಯಲ್ಲಪ್ಪ ಸಾತಪುತೆ, ರಿಯಾಜ ಢಾಲಾಯತ, ಅಂಜನವ್ವ, ಲಕ್ಷ್ಮೀಬಾಯಿ ಮುಂಡೆವಾಡೆ, ರಶೀದಾ ನದಾಫ, ಮಂಗಲವ್ವ ಲಿಂಗನಗೌಡ್ರ, ಹಾಲವ್ವ ಹೊನ್ನರಡ್ಡಿ, ಮಂಜವ್ವ ಸಾಸ್ವಿಹಳ್ಳಿ, ದುರ್ಗವ್ವ, ಅಮೀನ್ ಧಾರವಾಡ, ಮುಕ್ತುಸಾಬ ನಾಲಬಂದ, ಬಾಬುಲಾಲ ಸವಣೂರ, ದಾವಲ ಬೇಲೇರಿ, ಅಬ್ಬು ರಾಟಿ, ಯೂಸೂಫ ಶಿರಹಟ್ಟಿ, ರಾಜು ರೋಣದ, ಅತ್ತಾರ, ಉಮರ ಫಾರೂಕ್ ಹುಬ್ಬಳ್ಳಿ, ಜಹಾಂಗೀರ ಮುಳಗುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News