ಸಿಕೆಎಸ್ ಶಾಲೆಯ ಮಕ್ಕಳ ವಸ್ತು ಪ್ರದರ್ಶನ-2017ಕ್ಕೆ ಚಾಲನೆ
ಹಾಸನ, ಜು.26: ನಗರದ ಹೊಸ ಬಸ್‌ನಿಲ್ದಾಣದ ಬಳಿ ಇರುವ ಸಿಕೆಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ವಸ್ತು ಪ್ರದರ್ಶನ-2017ನ್ನು ಎಂಸಿಎಫ್ ಹಿರಿಯ ವಿಜ್ಞಾನಿ ಟಿ.ಎನ್. ಸುರೇಶ್ ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಒಂದು ದೇಶ ಮುಂದುವರೆಯಬೇಕಾದರೇ ಉತ್ತಮ ಸಿಟಿಜನ್ ಇರಬೇಕು. ಇಂಜಿನಿಯರ್, ಐಎಎಸ್, ಕೆಎಎಸ್ ಅಧಿಕಾರಿಗಳು, ಉತ್ತಮ ನಾಯಕರು, ಗುರುಗಳು ಹಾಗೂ ಉತ್ತಮ ಶಾಲೆಗಳು ನಿರ್ವಹಿಸುವ ಒಳ್ಳೆಯ ಕೆಲಸದ ಮೇಲೆ ಅನ್ವಯಿಸುತ್ತದೆ ಎಂದರು. ಒಳ್ಳೆ ವಾತವರಣದಲ್ಲಿ ಮಕ್ಕಳು ಬೆಳೆದರೇ ಮುಂದೆ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಾರೆ. ತಂದೆ-ತಾಯಿ ತಮ್ಮ ಮಕ್ಕಳಿಗಾಗಿ ಎಲ್ಲಾ ತ್ಯಾಗ ಮಾಡುತ್ತಾರೆ. ತಮಗೆ ಎಷ್ಟೆ ಕಷ್ಟ ಬಂದರೂ ಯೋಚನೆ ಮಾಡುವುದಿಲ್ಲ. ಶಾಲೆಯಲ್ಲಿ ಪಾಠ ಹೇಳಿಕೊಡುವ ಶಿಕ್ಷಕರು ಕೂಡ ವಿಷಯ ಮುಟ್ಟಿಸಲು ಮುಂದಾಗುತ್ತಾರೆ. ಮಕ್ಕಳು ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೇ ಪೌಂಢೇಶನ್ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡುತ್ತಾರೆ ಎಂದು ಕಿವಿಮಾತು ಹೇಳಿದರು.
ಎಲ್ಲದಕ್ಕೂ ಮಕ್ಕಳಲ್ಲಿ ವಿಧ್ಯೆ ಕಲಿಯುವಾಗ ವಿನಯತೆಯನ್ನು ರೂಢಿಸಿಕೊಂಡರೇ ಮಾತ್ರ ಈ ಭೂಮಿ ಮೇಲೆ ಮಾನ್ಯತೆ ಸಿಗುತ್ತದೆ. ಗುರುಗಳಿಗೆ, ಹಿರಿಯರಿಗೆ ಗೌರವ ನೀಡಿ, ಜೀವನದಲ್ಲಿ ವೈಜ್ಞಾನಿಕತೆಯ ಮನೋಭಾವವನ್ನು ಮಕ್ಕಳಿಂದಲೇ ರೂಢಿಸಿಕೊಂಡರೇ ದೇಶವನ್ನು ವಿಶ್ವದಲ್ಲೆ ಮಾಧರಿಯನ್ನಾಗಿ ಮಾಡಬಹುದು ಎಂದು ಕರೆ ನೀಡಿದರು.
ಮಕ್ಕಳ ವಸ್ತು ಪ್ರದರ್ಶನ-2017ರಲ್ಲಿ ಮಕ್ಕಳ ಕೈಯಿಂದಲೇ ತಯಾರಿಸಿದ ವಸ್ತು ಪ್ರದರ್ಶನವು ನೋಡುಗರ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಸಿಕೆಎಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಪುಟ್ಟಸ್ವಾಮಿ, ಎಲೈಟ್ ಶಾಲೆ ಆಡಳಿತಾಧಿಕಾರಿ ನಾಗರಾಜು ಇತರರು ಪಾಲ್ಗೊಂಡಿದ್ದರು.