×
Ad

ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ

Update: 2017-07-26 21:08 IST

ಹಾಸನ, ಜು.26: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರನೇಷನ್ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.


ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಪ್ರತಿಭಟನಗಾರರು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ 23ನೇ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನವನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದರು. ಕಳೆದ ಜೂನ್ 22ರಂದು ನಡೆದಂತಹ ಮಂಡಳಿಯ ಸಭೆಯಲ್ಲಿ ಕೈಗೊಂಡ ಕೆಲವು ಪ್ರಮುಖ ತೀರ್ಮಾನಗಳು ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಭವಿಷ್ಯದ ಬದುಕು, ಅವರ ಮಧ್ಯ ಕೆಲಸ ಮಾಡುತ್ತಿರುವ ಕಾರ್ಮಿಕ ಸಂಘಗಳ ಕೆಲಸದ ಮೇಲೆ ಮತ್ತು ಮಂಡಳಿಯ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಂಡಳಿಯಲ್ಲಿ ಸಂಗ್ರವಾಗುತ್ತಿರುವ ಹಣವನ್ನು ಈವರೆಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಠೇವಣಿ ಮಾಡಲಾಗುತ್ತಿತ್ತು ಮತ್ತು ಮಂಡಳಿ ವ್ಯವಹಾರವನ್ನು ನಡೆಸಲಾಗುತ್ತಿತ್ತು.23ನೇ ಮಂಡಳಿಯ ಇತರೆ ಕಾರ್ಯಸೂಚಿ 4ರಲ್ಲಿ ಅದೇ ರೀತಿಯಲ್ಲಿ ತೀರ್ಮಾನ ಮಾಡಲಾಗಿತ್ತು.

ಆದರೆ ನಂತರದಲ್ಲಿ ಈ ಬಗ್ಗೆ ತಿದ್ದುಪಡಿ ಮಾಡಿ ಕೇವಲ ಒಂದು ಅಥವಾ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಂತರ ಸರಕಾರಿ ನಿಯಂತ್ರಿತ ಕೋ-ಅಪರೇಟಿವ್ ಬ್ಯಾಂಕ್ ಗಳಲ್ಲಿ ಇಡಲು ತೀರ್ಮಾನಿಸಿರುವುದು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಹಾಗೂ ಮಂಡಳಿಯ ನಿಯಮಗಳಿಗೆ ವಿರುದ್ಧವಾದಂತಾಗಿದೆ ಎಂದು ದೂರಿದರು. 23ನೇ ಸಭೆಯ ಕಾರ್ಯಸೂಚಿ 11ರಲ್ಲಿ ಬೆಂಗಳೂರಿನಲ್ಲಿ ಮತ್ತು ರಾಜ್ಯದಲ್ಲಿ ಮಂಡಳಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಮಕ್ಕಳಿಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪಾಸ್ ನ್ನು ವಿತರಿಸಿ ಅದಕ್ಕೆ ತಗಲುವ ವೆಚ್ಚವನ್ನು ಮಂಡಳಿಯೇ ಭರಿಸಲು ತೀರ್ಮಾನಿಸಿದೆ. ಇದಕ್ಕೆ ಬೆಂಗಳೂರಿನ ಕಾರ್ಮಿಕರಿಗೆ ತಲಾ ಮಾಸಿಕ 1050 ರು. (ಬಿಎಂಟಿಸಿ) ಹಾಗೂ ಕೆಎಸ್‌ಆರ್‌ಟಿಸಿ ಗೆ 2 ಸಾವಿರ ರು. ನ್ನು ಮಂಡಳಿ ಹಣ ಪಾವತಿಸಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಿವುದಿಲ್ಲ. ಹಾಗೂ ಮಂಡಳಿಯ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುವುದರಿಂದ ಇದನ್ನು ಕೈಬಿಡಬೇಕು. ರಾಜ್ಯ ಸರಕಾರ ಇತ್ತೀಚೆಗೆ ರೈತರು ಸಹಕಾರಿ ಸಂಘಗಳ ಮೂಲಕ ಪಡೆದಿರುವ 50 ಸಾವಿರ ರು. ವರೆಗಿನ ಸಾಲವನ್ನು ಮನ್ನಾ ಮಾಡಿದೆ. ಹೀಗಾಗಿ ಈ ಸಾಲ ಮನ್ನಾಕ್ಕೆ ಹಣವನ್ನು ಹೊಂದಿಸಲು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಶೇಖರಣೆಯಾದ ಹಣವನ್ನು ಬಳಸಲು ಮುಂದಾಗಿದ್ದಾರೆ ಎಂದು ಅನುಮಾನ ಉಂಟಾಗಿದ್ದು, ಇದರಿಂದ ಲಕ್ಷಾಂತರ ಕಾರ್ಮಿಕರಿಗೆ ಆತಂಕವನ್ನು ಉಂಟು ಮಾಡುವಂತಾಗಿದೆ ಎಂದರು.

      
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News