ಮಾಜಿ ಸಿಎಂ ಧರಂಸಿಂಗ್ ವಿಧಿವಶ : ಹಾಸನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶ್ರದ್ಧಾಂಜಲಿ
ಹಾಸನ,ಜು.27: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಧರಂಸಿಂಗ್(80) ವಿಧಿವಶಗೊಂಡ ಹಿನ್ನಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಕಳೆದ ಹಲವು ದಿನಗಳಿಂದ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೃದಯಘಾತದಿಂದ ಕೊನೆ ಉಸಿರು ಎಳೆದಿದ್ದಾರೆ. ಧರಂಸಿಂಗ್ ಭಾವಚಿತ್ರಕ್ಕೆ ಹುಡಾ ಅಧ್ಯಕ್ಷ ಕೃಷ್ಣಕುಮಾರ್, ನಿರ್ದೇಶಕ ಶಂಕರರಾಜು, ಪಕ್ಷದ ಜಿಲ್ಲಾ ಉಪಾಧ್ಯಕ್ಷ ನಾರಾಯಣಗೌಡ, ಪಟೇಲ್, ಬಾಲರಾಜು, ಶಿವಕುಮಾರ್ ಇತರರು ಪುಷ್ಪ ಅರ್ಪಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಮಾತನಾಡಿದ ಹುಡಾ ಅಧ್ಯಕ್ಷ ಕೃಷ್ಣಕುಮಾರ್, ಧರ್ಮಸಿಂಗ್ ಸಿಎಂ ಆಗಿದ್ದಾಗ ಜನಪರ ಕಾರ್ಯಕ್ರಮವನ್ನು ತಂದಿದ್ದರು. ಸರ್ವ ಜನಾಂಗದವರಿಗೂ ಸಮನಾದ ಯೋಜನೆ ಜಾರಿ ಮಾಡಿದ್ದರು. ಜನ ಮೆಚ್ಚಿಗೆಗಳಿಸಿದ್ದ ಅವರು ಇಂದು ನಮ್ಮ ಕಣ್ಣ ಮುಂದೆ ಇಲ್ಲದಿರುವುದು ರಾಜ್ಯಕ್ಕೆ ಅಪಾರ ಹಾನಿ ಉಂಟಾಗಿದೆ. ಅವರಿಗೆ ದೇವರು ಶಾಂತಿ, ನೆಮ್ಮದಿ ನೀಡಲಿ. ಹಾಗೂ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ಕೊಡಲಿ ಎಂದು ಹಾರೈಸಿದರು.