×
Ad

ಮಗನಿಂದಲೇ ತಂದೆಗೆ ಮಾರಣಾಂತಿಕ ಹಲ್ಲೆ

Update: 2017-07-27 18:34 IST

ಹೊನ್ನಾವರ, ಜು.27: ತಾಲೂಕಿನ ಸಾಲಕೋಡದ ಸಾಲಮನೆಯಲ್ಲಿ ಕಂಠಪೂರ್ತಿ ಕುಡಿದು ಬಂದ ವ್ಯಕ್ತಿಯೊಬ್ಬ ತನ್ನ ತಂದೆಗೆ ಕಟ್ಟಿಗೆ ತುಂಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಅರೆಅಂಗಡಿಯ ಸಾಲಮನೆ ನಿವಾಸಿ ಅಶೋಕ ಹುಲಸ್ವಾರ್ (55) ತನ್ನ ಮಗನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ತಂದೆ. ಇವರು ತಮ್ಮ ಮನೆಯಲ್ಲಿ ಇರುವಾಗ ಮಗ ಈಶ್ವರ ಹುಲಸ್ವಾರ್ ಎಂಬಾತ ಮಂಗಳವಾರ ಸಂಜೆ ಸುಮಾರಿಗೆ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಕುಡಿದ ಅಮಲಿನಲ್ಲಿ ತನ್ನ ತಂದೆಯೊಂದಿಗೆ ಯಾವ ಕಾರಣವೂ ಇಲ್ಲದೆ ಜಗಳಕ್ಕಿಳಿದು ಮನೆಯಲ್ಲಿದ್ದ ಕಟ್ಟಿಗೆ ತುಂಡಿನಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.

ಕಟ್ಟಿಗೆಯ ಹೊಡೆತದಿಂದ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅಶೋಕ ಹುಲಸ್ವಾರ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಶೋಕ ಹುಲಸ್ವಾರ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಮಗ ಈಶ್ವರ ಹುಲಸ್ವಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News