×
Ad

ಅಪಘಾತದಲ್ಲಿ ಯೋಧ ಸಾವು

Update: 2017-07-27 19:57 IST

ಮಡಿಕೇರಿ ಜು.27 : ವಿರಾಜಪೇಟೆ-ಮೈಸೂರು ಮಾರ್ಗದಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಯೋಧ ಸಾವನ್ನಪ್ಪಿದ ಘಟನೆ ಸಂಜೆ 4.30 ರ ಸಮಯದಲ್ಲಿ ನಡೆದಿದೆ.

ಛತ್ತೀಸ್‍ಗಡ್‍ನಲ್ಲಿ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾರಿಮಂಡ ತಿಮ್ಮಯ್ಯ (45) ಮೃತ ಪಟ್ಟ ಯೋದ. ವಿರಾಜಪೇಟೆಯಿಂದ ಗೋಣಿಕೊಪ್ಪ ಕಡೆಗೆ ತನ್ನ ಅ್ಯಕ್ಟಿವ ಸ್ಕೂಟರ್‍ನಲ್ಲಿ ಬರುತ್ತಿದ್ದ ತಿಮ್ಮಯ್ಯ ಹಾತೂರು ಸಮೀಪ ಮಾರುತಿ ಓಮ್ನಿಯನ್ನು ಹಿಂದಿಕ್ಕುವ ಸಂದರ್ಭ ತನ್ನ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಪರಿಣಾಮ ತಲೆ ಭಾಗದಲ್ಲಿ ತೀವ್ರ ರಕ್ತ ಸ್ರಾವಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಿರುಗೂರು ಮೂಲದ ತಿಮ್ಮಯ್ಯ ಅವರು ಗೋಣಿಕೊಪ್ಪದ ಪಟೇಲ್ ನಗರದಲ್ಲಿ ವಾಸಿಸುತ್ತಿದ್ದರು. ರಜೆಯ ಮೇಲೆ ಊರಿಗೆ ಬಂದಿದ್ದ ಇವರು ಇಂದು ರಾತ್ರಿ (ಜು.27) ಸೈನ್ಯಕ್ಕೆ ಹಿಂತಿರುಗಬೇಕಿತ್ತು. ಮೃತ ಯೋಧ ತಿಮ್ಮಯ್ಯ ಪತ್ನಿ ಪವಿತ್ರ, ಮಕ್ಕಳಾದ ಗೌರವ್ ಗಣಪತಿ ಹಾಗೂ ಕ್ರಿಶಾ ದೇಚಮ್ಮ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News