×
Ad

ಟ್ರ್ಯಾಕ್ಟರ್ ಮಗುಚಿ ಬಿದ್ದು ವ್ಯಕ್ತಿ ಸಾವು

Update: 2017-07-27 20:20 IST

ಮದ್ದೂರು, ಜು.27: ಟ್ರ್ಯಾಕ್ಟರ್ ಮಗುಚಿ ಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಮರೀಗೌಡರ ಪುತ್ರ ಎಚ್.ಎಂ.ರವಿಕುಮಾರ್(45) ಸಾವನ್ನಪ್ಪಿದವರು. ರವಿಕುಮಾರ್ ಟ್ರ್ಯಾಕ್ಟರ್ ಮಾಲಕರಾಗಿದ್ದು, ತಾವೇ ಚಾಲಕರೂ ಆಗಿದ್ದರು.
ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಗ್ರಾಮದ ಕಟ್ಟೆಯ ಕಾಮಗಾರಿ ನಡೆಯುತ್ತಿದ್ದು, ಮಣ್ಣನ್ನು ಸಾಗಿಸುವಾಗ ಟ್ರ್ಯಾಕ್ಟರ್  ಬಿದ್ದು ಈ ದುರ್ಘಟನೆ ನಡೆದಿದೆ.

ಮೃತ ರವಿಕುಮಾರ್ ಪತ್ನಿ ಕವಿತ, ಪುತ್ರ ವರುಣ್‌ಕುಮಾರ್, ಪುತ್ರಿ ವರ್ಷ ಅವರನ್ನು ಅಗಲಿದ್ದು, ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News