ಶಂಕಿತ ಡೆಂಗ್ ಜ್ವರಕ್ಕೆ ಬಾಲಕಿ ಬಲಿ
Update: 2017-07-27 20:21 IST
ಮದ್ದೂರು, ಜು.27: ಶಂಕಿತ ಡೆಂಗ್ ಕಾಯಿಲೆಯಿಂದ ಆರನೆ ತರಗತಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಪ್ಪದಲ್ಲಿ ನಡೆದಿದೆ.
ಮುಕುಂದ ಮಾಲತಿ ದಂಪತಿ ಪುತ್ರಿ ಮಧುಪ್ರಿಯ(11) ಶಂಕಿತ ಡೆಂಗ್ ಜ್ವರಕ್ಕೆ ಬಲಿಯಾದ ಬಾಲಕಿಯಾಗಿದ್ದು, ಈಕೆ ಎರಡು ದಿನದಿಂದ ತೀವ್ರ ಜ್ವಲದಿಂದ ಬಳಲುತ್ತಿದ್ದಳು.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಂಡ್ಯದ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ.