ಕೆರೆಯಲ್ಲಿ ಧರಣಿ ಬೆಂಬಲಿಸಿ ಮದ್ದೂರು ಬಂದ್ ಯಶಸ್ವಿ
ಮದ್ದೂರು, ಜು.27: ಕಾವೇರಿ ಕೊಳ್ಳದ ನಾಲೆಗಳಿಗೆ ನೀರುಹರಿಸಲು ಆಗ್ರಹಿಸಿ ಕಳೆದ 20 ದಿನದಿಂದ ತಾಲೂಕಿನ ದೇಶಹಳ್ಳಿ ಕೆರೆ (ಮದ್ದೂರು ಕೆರೆ)ಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಗುರುವರ ಮದ್ದೂರು ಬಂದ್ ಆಚರಿಸಲಾಯಿತು.
ಧರಣಿಗೆ ಸರಕಾರ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಗುರುವಾರ ಕೆರೆಯಂಗಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜತೆಗೆ, ವರ್ತಕರು ಸ್ವಯಂಪ್ರೇರಿತರಾಗಿ ಮದ್ದೂರು ಮತ್ತು ಶಿವಪುರದಲ್ಲಿ ಅಂಗಡಿಗಳನ್ನು ಬಂದ್ ಮಾಡಿದ್ದರು.
ಬೆಳಗ್ಗೆಯಿಂದ ಸಂಜೆವರೆಗೂ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಶಾಲಾ ಕಾಲೇಜುಗಳನ್ನೂ ಸಹ ಮುಚ್ಚಲಾಗಿತ್ತು. ಚಿತ್ರಮಂದಿರಗಳಲ್ಲಿ ಹಗಲು ಪ್ರದರ್ಶನ ರದ್ದುತಪಡಿಸಲಾಗಿತ್ತು.
ಜಯಕರ್ನಾಟಕ, ವಕೀಲರಸಂಘ, ಕನ್ನಡ ಸೇನೆ, ರೈತಸಂಘ, ಗ್ರಾಪಂ ಸದಸ್ಯರ ಒಕ್ಕೂಟ, ಮುಸ್ಲಿಂ ವೇದಿಕೆ, ತಮಿಳರ ಸಂಘ, ಕ್ಲೀನ್ಸ್ ನೌಕರರ ಸಂಘ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಸಾಯಿ ಗಾರ್ಮೆಂಟ್ಸ್ ನೌಕರರು, ಮೀನುಗಾರರ ಸಂಘ, ಇತರೆ ಸಂಘಟನೆಗಳ ಕಾರ್ಯಕರ್ತರು, ಕುಣಿಗಲ್ ಸಿದ್ದರಾಮೇಶ್ವರ ಚೈತನ್ಯ ಸ್ವಾಮೀಜಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುತ್ತಮುತ್ತಲ ಗ್ರಾಮಸ್ಥರು ನೂರಾರು ಜಾನುವಾರುಗಳು, ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳನ್ನು ಪ್ರತಿಭಟನೆಗೆ ಕರೆತಂದಿದ್ದರು. ರಾಮನಗರ, ಚನ್ನಪಟ್ಟಣದಿಂದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕೆರೆಯವರೆಗೆ ಬೈಕ್ ರ್ಯಾಲಿ ನಡೆಸಿದರು.
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಮುಖಂಡರಾದ ಮಾಜಿ ಸಂಸದೆ ತೇಜಸ್ವಿನಿಗೌಡ, ಸರಕಾರದ ವಿರುದ್ಧ ಕಿಡಿಕಾರಿದರು. ಕೂಡಲೇ ನಾಲೆಗೆ ನೀರುಹರಿಸದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಉಪವಾಸ ಸತ್ಯಾಗ್ರಹ: ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ನಿವೃತ್ತ ಅಬಕಾರಿ ಅಧಿಕಾರಿ ನಿಂಗೇಗೌಡ, ಸ್ವಾತಂತ್ರ್ಯ ಹೋರಾಟಗಾರ ನಗರಕೆರೆ ಹನುಮಂತಯ್ಯ, ಹರಳಕೆರೆ ಚಂದ್ರು, ದೇಶಹಳ್ಳಿ ಪ್ರಸಾದ್, ಇತರರು ಉಪವಾಸ ಸತ್ಯಾಗ್ರಹ ಆರಂಭಿಸಿದರು.
ವಕೀಲರ ಸಂಘದ ಅಧ್ಯಕ್ಷ ಅಶೋಕ್‌ಕುಮಾರ್, ರೈತಸಂಘದ ಜಿಲ್ಲಾಧ್ಯಕ್ಷ ಬೋರಾಪುರಶಂಕರೇಗೌಡ, ಅಶೋಕ್‌ಕುಮಾರ್, ರಾಜೇಶ, ಪುಟ್ಟರಾಜು, ವಿ.ಕೆ.ಶ್ರೀನಿ ಾಸಕುಮಾರ್, ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಗುಂಡ ಮಹೇಶ್, ಸುನಿ ಲ್, ಶಂಕರ್, ದಿನೇಶ್, ಚೆನ್ನಪ್ಪ, ವೀರಪ್ಪ, ಇಂದು, ಲೋಕೇಶ್, ಗೋಪಾಲಕೃಷ್ಣ, ವಳೆಗೆರೆಹಳ್ಳಿ ಸ್ನೇಹಜೀವಿ ಯುವಕರ ಬಳಗದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.