ಮಕ್ಕಳಿಗೆ ನಾಟಕ ನೋಡುವ ಅಭಿರುಚಿ ಬೆಳೆಸಬೇಕಿದೆ: ಬಾ.ಹ.ರಮಾಕುಮಾರಿ

Update: 2017-07-27 15:18 GMT

ತುಮಕೂರು, ಜು.27: ಮನುಷ್ಯ ಸ್ವಾರ್ಥ ಪರನಾಗಿ ಸಾಮೂಹಿಕ ಸ್ಪಂದನೆಯನ್ನೇ ಕಳೆದುಕೊಂಡಿರುವ ಇಂದಿನ ದಿನಗಳಲ್ಲಿ ಮನುಷ್ಯರ ನಡುವೆ ಸಂಬಂಧ ಬೆಸೆಯುವ ನಾಟಕಗಳನ್ನು ನೋಡುವ ಅಭಿರುಚಿಯನ್ನು ನಾವೆಲ್ಲರೂ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ ಮನೆ ವತಿಯಿಂದ ಭಾರತ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಮಂತ್ರಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ರಂಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಮಕ್ಕಳಲ್ಲಿ ನಾಟಕ ನೋಡುವ ಅಭಿರುಚಿ ಬೆಳೆಸದಿದ್ದರೆ, ಸಾಮಾಜಿಕ ಸ್ಪಂದನೆಯೇ ಇಲ್ಲದಂತಹ ಸ್ಥಿತಿಗೆ ತಲುಪುವ ಅಪಾಯವಿದೆ ಎಂದರು.

ಇಂದು ಮನುಷ್ಯ ತನ್ನ ಕಣ್ಣ ಮುಂದೆಯೇ ತಪ್ಪು ನಡೆದರೂ ಅದನ್ನು ಖಂಡಿಸುವ, ಅದಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ತಾನು ತನ್ನದು ಎಂಬ ಸ್ವಾರ್ಥಕ್ಕೆ ಬಲಿಯಾಗಿ ಸಾಮಾಜಿಕ ಸ್ಪಂದನೆಯನ್ನೇ ಕಳೆದುಕೊಂಡಿದ್ದಾರೆ. ಇದರ ಫಲವಾಗಿ ಜನರ ಮನಸ್ಸುಗಳನ್ನು ಕಟ್ಟುವ ನಾಟಕಗಳು ಸಹ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಸಂಕಷ್ಟದಲ್ಲಿಯೂ ರಂಗಭೂಮಿಯ ಉಳಿವಿಗಾಗಿ ನಾಟಕಮನೆ ಸ್ಭೆರಿದಂತೆ ಜಿಲ್ಲೆಯ ಹಲವಾರು ರಂಗತಂಡಗಳು ನಿರಂತರ ಪ್ರಯೋಗಗಳ ಮೂಲಕ ಪ್ರಯತ್ನಿಸುತ್ತಿರುವುದು ಆಶಾವಾದದ ಸಂಗತಿಯಾಗಿದೆ ಎಂದ ಅವರು, ನಾಟಕಮನೆ ನಿರ್ಮಿಸುತ್ತಿರುವ ರಂಗಮಂದಿರ ಸಹ ಕುಟುಂತಾ ಸಾಗಿದೆ. ಕನ್ನಡ ಭವನವೂ ನಿಧಾನವಾಗಿ ಪೂರ್ಣಗೊಂಡಿದ್ದು, ಡಿಸೆಂಬರ್ ವೇಳೆಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಬಾ.ಹ.ರಮಾಕುಮಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಚಿುರಿ, ಜಾನಪದ ಕಲಾವಿದ ಬಂಡ್ಲಹಳ್ಳಿ ವಿಜಯಕುಮಾರ್ ಮಾತನಾಡಿದರು. ರಕ್ತವರ್ಣೆ ನಾಟಕದ ನಿರ್ದೇಶಕಿ ದಾಕ್ಷಾಯಿಣಿ ಭಟ್, ನಾಟಕಮನೆ ಕಾರ್ಯನಿರ್ವಾಹಕ ಟ್ರಸ್ಟಿ ಮಹಾಲಿಂಗು, ಮೆಳೇಹಳ್ಳಿ ದೇವರಾಜು ಮತ್ತಿತರರು ವೇದಿಕೆಯಲ್ಲಿದ್ದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News