ಕಾರ್ಗಿಲ್ ವಿಜಯ ದಿವಸ ಆಚರಣೆ

Update: 2017-07-28 13:08 GMT

ಹಾಸನ, ಜು.28: ನಗರದ ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಕಳೆದ ವರ್ಷ ಸಿಯಾಚಿನ್‌ನಲ್ಲಿ ವೀರ ಮರಣ ಹೊಂದಿದ ಸುಭೇದರ್ ನಾಗೇಶ್ ಪತ್ನಿ ಆಶಾ ಅವರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೆ ಮೊದಲು ಅಮರ ಜವಾನ ಜ್ಯೋತಿಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಲಾಯಿತು. ನಂತರ ಮಾತನಾಡಿದ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಅಧ್ಯಕ್ಷ ಬಾಲಾಜಿ, ದೇಶಕ್ಕಾಗಿ ಅನೇಕರು ತಮ್ಮ ಪ್ರಾಣವನ್ನೆ ನೀಡಿದ್ದಾರೆ. ನಿದ್ದೆ ಇಲ್ಲದೆ ಹಗಲು ರಾತ್ರಿ ಭಾರತ ದೇಶದ ಗಡಿಯಲ್ಲಿ ಕಾಯುವ ಯೋಧರು ಸೇವೆಯೆ ನನ್ನ ಗುರಿ ಎಂದು ಪ್ರಾಣ ನೀಡುತ್ತಾರೆ. ಪ್ರಾಮಾಣಿಕವಾಗಿ ದೇಶ ಸೇವೆ ಮಾಡಿದವರ ಇಂತಹ ಸವಿ ನೆನಪು ಮಾಡಿಕೊಳ್ಳುವುದು ಉತ್ತಮವಾಗಿದೆ ಎಂದರು. ತಂದೆ-ತಾಯಿಗಿಂತ ಮಿಗಿಲಾದುದ್ದು ದೇಶ ಸೇವೆ ಎಂದು ಗಡಿಯಲ್ಲಿ ಎದುರಾಳಿಯೊಂದಿಗೆ ಸೆಣೆಸಾಡುತ್ತಾರೆ. ಈ ವೇಳೆ ಅನೇಕರು ತಮ್ಮ ಜೀವವನ್ನೆ ನೀಡಿದ್ದಾರೆ. ಇಂತವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಐ. ನರೇಂದ್ರ, ಜೀವನ್, ಕಾರ್ಯದರ್ಶಿ ಮನು, ಖಜಾಂಚಿ ಜಗದೀಶ್, ಮುಖ್ಯ ಅತಿಥಿಯಾಗಿ ಆಡಿಟರ್ ಜಲಂದರ್, ಟೈಮ್ಸ್ ಶಾಲೆ ಕಾರ್ಯದರ್ಶಿ ಗಂಗಾಧರ್ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News