ಕಾರ್ಗಿಲ್ ವಿಜಯ್ ದಿವಸವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ

Update: 2017-07-28 13:15 GMT

ಹಾಸನ, ಜುಲೈ. 28: ಕಾರ್ಗಿಲ್ ವಿಜಯ್ ದಿವಸ್ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ಮುಂದಿನ ಯುವ ಪೀಳಿಗೆಗೆ ಯುದ್ಧದ ಬಗ್ಗೆ ಅರಿವು ಮೂಡುವಂತೆ ಮಾಡಬೇಕು ಎಂದು ಸಹರಾ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಮಾಜಿ ಸೈನಿಕ ಶಫಿ ಅಹಮ್ಮದ್ ಅವರು ಹೇಳಿದರು.

18 ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಮತ್ತು ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ರವರ ಸ್ಮರಣೀಯ ದಿನದ ಅಂಗವಾಗಿ ಸಹರಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಮತ್ತು ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಸ್ಮರಣೀಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಪಾದಕ ಆರ್. ಪಿ. ವೆಂಕಟೇಶ್ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಫಿ ಆಹಮ್ಮದ್,  ಯುವಕರು ಹೆಚ್ಚಾಗಿ ಸೈನ್ಯಕ್ಕೆ ಸೇರಲು ಮುಂದಾಗಬೇಕು. ಸೈನ್ಯಕ್ಕೆ ಗಣ್ಯ ವ್ಯಕ್ತಿಗಳ ಮಕ್ಕಳಾಗಲೀ, ರಾಜಕೀಯ ಮುಖಂಡರ ಮಕ್ಕಳಾಗಲಿ ಸೇರ ಬಯಸುವುದಿಲ್ಲ . ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಜಿಲ್ಲಾಡಳಿತ ಪ್ರತಿಯೊಂದು ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ಆಚರಿಸುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡರು, ನಾವೆಲ್ಲರೂ ನೆಮ್ಮದಿಯಿಂದಿರಲು ನಮ್ಮ ಸೈನಿಕರ ತ್ಯಾಗ, ಬಲಿದಾನಗಳ ಪರಿಶ್ರಮವೇ ಕಾರಣ, ನಮ್ಮ ತಾಯ್ನಾಡಿಗಾಗಿ ಪ್ರಾಣವನ್ನೆ ಮುಡಿಪಾಗಿಡುವ ವೀರ ಯೋಧರನ್ನು ನೆನಪಿಸಿತ್ತ ನಾವೆಲ್ಲ ಇಂದು ರಕ್ತದಾನ ಮಾಡಬೇಕು ಎಂದರು.

ಮಾಜಿ ಕ್ಯಾಪ್ಟನ್ ಬೆಟ್ಟೆಗೌಡ ಕಾಗಿಲ್ ಯುದ್ಧದಲ್ಲಿ ನಡೆದ ಹಲವು ಘಟನೆಗಳ ಬಗ್ಗೆ ವಿವರಣೆ ನೀಡುತ್ತಿದ್ದಂತೆಯೆ ಸಭಿಕರ ಕಣ್ಣಲ್ಲಿ ಕಂಬನಿ ಮಡುಗಟ್ಟಿತು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಹಾಸನ ಜಿಲ್ಲೆಯ ವೀರಯೋಧ ವೆಂಕಟ್‌ರವರನ್ನು ಸ್ಮರಿಸುತ್ತ ನೀಲಮ್ಮ ವೆಂಕಟ್ ರವರಿಗೆ ಸನ್ಮಾನ ಮಾಡಿದಲ್ಲದೆ ಹಾಸನ ಜಿಲ್ಲೆಯ ಇತರೆ ಹುತಾತ್ಮ ವೀರಯೋಧರ ಕುಟುಂಬದ ಸದಸ್ಯರುಗಳಾದ ಸಕಲೇಶಪುರದ ಎ.ಕೆ.ಸಾಗರ್ ತಂದೆ ಕುಮಾರೆಗೌಡ, ಸತ್ಯಮಂಗಲ ಗ್ರಾಮದ ಯೋಗನಂದರ ಪತ್ನಿ ಲಕ್ಷ್ಮೀ, ತೇಜೂರು ಗ್ರಾಮದ ಟಿ.ಟಿ. ನಾಗೇಶ್‌ರ ಪತ್ನಿ ಆಶಾ ಹಾಗೂ ಶಾಂತಿಗ್ರಾಮದ ಸಂದೀಪ್ ಶೆಟ್ಟಿಯವರ ತಾಯಿ ಗಂಗಮ್ಮ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 50 ಕ್ಕೂ ಹೆಚ್ಚು ಯುವಕ-ಯುವತಿಯರು ರಕ್ತದಾನ ಮಾಡಿದರು, ಆಯ್ದ ವಿಕಲಚೇತನರಿಗೆ ಆರ್ಥಿಕ ನೆರವು ನೇಡಲಾಯಿತು, ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರವರ ಸ್ಮರಣೀಯವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೋಟ್ ಬುಕ್ಸ್ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು. ನಿವೃತ್ತ ಆರ್.ಟಿ.ಓ ಅಧಿಕಾರಿಗಳಾದ ಎಸ್.ಎಸ್. ಪಾಷ, ಎ.ಪಿ.ಅಹಮ್ಮದ್, ಸೈನಿಕರಾದ ರಾಮು, ಶಿವರಾಂ ಆರ್, ಡಾ.ಅಭಿಭ್, ಹೆಚ್.ಎಲ್. ಭಾರತಿ, ಕಾಂತರಾಜು ಮತ್ತಿತರ ಗಣ್ಯರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News