ನ್ಯಾಯಬೆಲೆ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ ಅಳವಡಿಸಲು ಸೂಚನೆ

Update: 2017-07-28 13:19 GMT

ಮೂಡಿಗೆರೆ, ಜು.28: ನ್ಯಾಯಬೆಲೆ ಅಂಗಡಿಗಳಿಗೆ ಸರಕಾರದದ ಆದೇಶದ ಪ್ರಕಾರ ಪಾಯಿಂಟ್ ಆಫ್ ಸೇಲ್ ಅಳವಡಿಸಿ ಪಡಿತರ ವಿತರಿಸುವಂತೆ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಉಪ ನಿರ್ದೇಶಕ ಮುನಿಸ್ವಾಮಿ ಅಯ್ಯ ಸೂಚನೆ ನೀಡಿದರು.

ಅವರು ಶುಕ್ರವಾರ ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಕರ ಸಭೆಯಲ್ಲಿ ಮಾತನಾಡಿದರು. ಪಾಯಿಂಟ್ ಆಫ್ ಸೇಲ್ಮೂಲಕ ವಿತರಣೆ ಮಾಡುವುದರಿಂದ ಪ್ರತಿದಿನದ ಲೆಕ್ಕಾಚಾರಗಳು ಇಲಾಖೆಯ ಗಮನಕ್ಕೆ ಬರುತ್ತದೆ. ಪಡಿತರದಾರರಿಗೆ ಅರ್ಹ ರೀತಿಯಲ್ಲಿ ಲಭ್ಯವಾಗಬೇಕಿರುವ ಆಹಾರ ಧಾನ್ಯಗಳು ದೊರೆಯುತ್ತವೆ. ಎಲ್ಲೂ ಲೋಪದೋಷ ಆಗಲಾರದು. ಆದರೆ ಅದು ಇಲಾಖೆಯ ಗಮನಕ್ಕೆ ಮುಂಚಿತವಾಗಿ ಬರುತ್ತದೆ ಎಂದು ಮಾಹಿತಿ ನೀಡಿದರು.

2 ತಿಂಗಳ ಹಿಂದೆಯೇ ಪಾಯಿಂಟ್ ಆಫ್ ಸೇಲ್ಅಳವಡಿಕೆಗೆ ಸೂಚನೆ ನೀಡಿದ್ದರೂ ಯಾರೊಬ್ಬರೂ ಅಳವಡಿಕೆ ಮಾಡಿಲ್ಲ. ಆದ್ದರಿಂದ ಹಿರಿಯ ಅಧಿಕಾರಿಗಳು ಈ ಬಗ್ಗೆ ಒತ್ತಡ ಹೇರುತ್ತಿದ್ದಾರೆ. ಯಾವ ಕಾರಣಕ್ಕೆ ಅಳವಡಿಕೆ ಮಾಡಿಲ್ಲ ಎನ್ನುವ ಕಾರಣವನ್ನು ಕೇಳುತ್ತಿದ್ದಾರೆ. ಆದ್ದರಿಂದ ತಡ ಮಾಡದೆ ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ಯಂತ್ರವನ್ನು ಅಳವಡಿಸಲೇಬೇಕು. ಇಲ್ಲದಿದ್ದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಯಂತ್ರ ಅಳವಡಿಕೆಯಿಂದ ಪ್ರತಿ ಕೆ.ಜಿ. ಆಹಾರ ಧಾನ್ಯಗಳ ವಿತರಣೆಗೆ ಪಡಿತರ ವಿತರಕರಿಗೆ 0.87 ಪೈಸೆ ಕಮಿಷನ್ ದೊರೆಯಲಿದೆ. ನ್ಯಾಯಬೆಲೆ ಅಂಗಡಿಗಳವರಿಗೆ ಯಾವುದೇ ರೀತಿಯಲ್ಲಕೂ ನಷ್ಟವಾಗಲಾರದು.ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಪಾಯಿಂಟ್ ಆಫ್ ಸೇಲ್
 ಅಳವಡಿಕೆ ಕಡ್ಡಾಯವಾಗಿದೆ. ಇದರ ವಿರುದ್ದ ಕೆಲವರು ಹೈಕೋರ್ಟ್‌ನಿಂದ ತಡೆಯುಆಜ್ಞೆ ತಂದಿದ್ದು, ಅಂತವರನ್ನು ಹೊರತುಪಡಿಸಿ ಉಳಿದವರು ತಕ್ಷಣವೇ ಯಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

 ಸಭೆಯಲ್ಲಿ ಟಿಎಪಿಸಿಎಂಎಸ್ ವ್ಯವಸ್ಥಾಪಕ ನಿಧೇಶಕ ರಾಮಕೃಷ್ಣ, ಆಹಾರ ನಿರೀಕ್ಷಕ ಶ್ರೀನಿವಾಸ್, ತಾಲೂಕು ಪಡಿತರ ವಿತರಕ ಸಂಘದ ಅಧ್ಯಕ್ಷ ಎಂ.ಎಸ್.ಅಣ್ಣೇಗೌಡ ಮತ್ತಿತರರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News