22ನೆ ದಿನಕ್ಕೆ ಕಾಲಿಟ್ಟ ಕೆರೆಯಂಗಳದ ಧರಣಿ

Update: 2017-07-28 14:34 GMT

ಮದ್ದೂರು, ಜು.28: ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೇತೃತ್ವದಲ್ಲಿ ತಾಲೂಕಿನ ದೇಶಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ 22ನೆ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಸತ್ಯಾಗ್ರಹ ಕೈಗೊಂಡಿರುವ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರ ಅರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಶುಕ್ರವಾರ ಡಿಎಚ್‌ಒ ಡಾ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ನಿರಂಜನ್ ಚಿಕಿತ್ಸೆ ನೀಡಿದರು.

ಮಧ್ಯಾಹ್ನದ ವೇಳೆಗೆ ಧರಣಿ ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ವಿಜಯ್‌ಕುಮಾರ್, ಸಿಎಂ, ಸಚಿವರೊಂದಿಗೆ ಮಾತನಾಡಿ ನೀರು ಬಿಡಿಸಲಾಗುವುದು. ಉಪವಾಸ ಕೈಬಿಡಿ ಎಂದು ಮನವಿ ಮಾಡಿದರು. ಉಪವಾಸ ಕೈಬಿಟ್ಟ ಚಳವಳಿಗಾರರು, ಆದರೆ, ನೀರುಹರಿಸುವವರೆಗೂ ಧರಣಿ ಮುಂದುವರಿಸುವುದಾಗಿ ಹೇಳಿದರು.

ಬೆಳಗ್ಗೆ ಉಪವಿಭಾಗಾಧಿಕಾರಿ ರಾಜೇಶ್, ಡಿವೈಎಸ್ಪಿಗಳಾದ ಸಿ.ಮಲ್ಲಿಕ್, ಚಂದ್ರಶೇಖರ್ ಭೇಟಿ ನೀಡಿದ್ದರೆ, ಗುರುವಾರ ತಡರಾತ್ರಿ ಜಿಲ್ಲಾಧಿಕಾರಿ ಎಸ್.ಝೀಯಾವುಲ್ಲಾ, ಎಸ್ಪಿ ರಾಧಿಕಾ ಅವರು ಭೇಟಿ ನೀಡಿದ್ದರು.

ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಹರಳಕೆರೆ ಚಂದ್ರು, ಹನುಮೇಗೌಡ, ಪ್ರಸನ್ನಕುಮಾ ್, ಲಿಂಗೇಗೌಡ, ದೇಶಹಳ್ಳಿ ಪ್ರಸಾದ್, ಗುಂಡ ಮಹೇಶ್, ಸುನೀಲ್, ಶಂಕರ್, ದಿನೇಶ್, ಚೆನ್ನಪ್ಪ, ವೀರಪ್ಪ, ಇಂದು, ಲೋಕೇಶ್, ಗೋಪಾಲಕೃಷ್ಣ, ಸ್ನೇಹ ಜೀವಿ ಯುವಕರ ಬಳಗದ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News