×
Ad

ಒತ್ತುವರಿ ತೋಟ ಉಳಿಸಿಕೊಡಲು ಮಾಜಿ ಪ್ರಧಾನಿಗೆ ಮನವಿ

Update: 2017-07-29 18:03 IST

ಚಿಕ್ಕಮಗಳೂರು, ಜು.29: ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿದ ಬೆಳೆಗಾರರ ತೋಟಗಳನ್ನು ಉಳಿಸಿಕೊಡುವಂತೆ ಶಾಸಕ ಬಿ.ಬಿ.ನಿಂಗಯ್ಯ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು ಎಂದು ಜೆಡಿಎಸ್ ವಕ್ತಾರ ಹೊಲದಗದ್ದೆ ಗಿರೀಶ್ ತಿಳಿಸಿದ್ದಾರೆ.

ಅವರು ಈ ಕುರಿತು ಶನಿವಾರ ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ನೂರಾರು ವರ್ಷಗಳ ಹಿಂದಿನಿಂದಲೂ ಕಾಫಿ, ಅಡಿಕೆ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿರುವ ಮಲೆನಾಡು ಭಾಗದ ರೈತ ಕುಟುಂಬಗಳು ಜಾಗದ ಕೊರತೆಯಿಂದ ಅಲ್ಪ ಸ್ವಲ್ಪ ಸರ್ಕಾರಿ ಭೂಮಿಗಳನ್ನು ಒತ್ತುವರಿ ಮಾಡಿರುವುದು ನಿಜ. ಆದರೆ ಅದು ಕುಟುಂಬ ನಿರ್ವಹಣೆಗೆ ಅನುಕೂಲ ವಾಗಲು ಹೊರತು ಯಾವುದೆ ಐಶರಾಮಿ ಜೀವನ ನಡೆಸಲು ಅಲ್ಲ ಹಾಗಾಗಿ ಈ ಭಾಗದ ಒತ್ತುವರಿ ಜಾಗವನ್ನು ಖುಲ್ಲಾ ಮಾಡದೆ ಯತಾಸ್ಥಿತಿಯಲ್ಲಿ ಉಳಿಸಿಕೊಟ್ಟು ರೈತರು ಹಾಗೂ ಬೆಳೆಗಾರರ ಜೀವನಕ್ಕೆ ಸಹಕರಿಸಲು ಮನವಿ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡರು ಜಿಲ್ಲಾಧಿಕಾರಿ ಹಾಗೂ ಉಪರಣ್ಯ ಸಂರಕ್ಷಣಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ, ಒತ್ತುವರಿ ಜಮೀನಿನ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಜಿಲ್ಲಾ ಕೇಂದ್ರಕ್ಕೆ ಬಂದು ಡಿಸಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮುಖ್ಯಮಂತ್ರಿಯಿಂದ ಶಿಫಾರಸ್ಸು ಪತ್ರ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವರಿಕೆ ಮಾಡಿ ನಿಮ್ಮ ಒತ್ತುವರಿ ಜಮೀನನ್ನು ಉಳಿಸಲು ಸಕಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್, ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್, ಹೆಚ್.ಎಸ್.ಮಂಜಪ್ಪ, ಹೆಚ್.ಎನ್.ಕೃಷ್ಣೇಗೌಡ, ಸತೀಶ್, ಶಶಿಧರ್, ಶಿವಣ್ಣ, ಸ್ವಾಮಿ, ಪುಟ್ಟಸ್ವಾಮಿ, ನಾಗೇಶ್ ಅರಸು, ಬಸವರಾಜು, ಈರಯ್ಯ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News