×
Ad

ಅಕ್ರಮ ಗಂಧ: ಆರೋಪಿಗಳ ಬಂಧನ

Update: 2017-07-29 19:39 IST

ಕಡೂರು, ಜು. 29: ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಅನುಮಾನಸ್ಪದವಾಗಿ ನಿಂತಿದ್ದ ಟಾಟಾ ಸುಮೋ ಹಾಗೂ ಬೈಕನ್ನು ಪರಿಶೀಲಿಸಿದಾಗ ಅಕ್ರಮವಾಗಿ ಗಂಧ ಸಾಗಿಸುತ್ತಿದ್ದು ಶುಕ್ರವಾರ ಸಂಜೆ ಪತ್ತೆಯಾಗಿದೆ.

ಆರೋಪಿ ಕೊರಚರಹಟ್ಟಿ ಗ್ರಾಮದ ಕೆ.ಶಿವರಾಜು(18), ನಾಗರಾಳು ಗ್ರಾಮದ ಎನ್.ಜಿ.ರಾಕೇಶ್(24) ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ.

ತಾಲೂಕಿನ ಬುಕ್ಕಸಾಗರ ಗೇಟ್‌ನಿಂದ ರಂಗೇನಹಳ್ಳಿಯ ಕಡೆಗೆ ಗಸ್ತು ತಿರುಗುತ್ತಿದ್ದ ವೇಳೆ ಕೊರಚರಹಟ್ಟಿ ಗ್ರಾಮ ಸಮೀಪದ ಬುಕ್ಕಸಾಗರ ಕೆರೆಯ ಕೋಡಿ ಹತ್ತಿರ ಬೈಕ್ ಹಾಗೂ ಟಾಟಾ ಸುಮೋ ವಾಹನದಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಒರಟು ಕೆತ್ತನೆ ಮಾಡಿದ ಶ್ರೀಗಂಧದ ತುಂಡುಗಳು ಮತ್ತು ಚಕ್ಕೆಗಳನ್ನು ತುಂಬಿಕೊಂಡು ಹೋಗುತ್ತಿದ್ದುದ್ದು ಪತ್ತೆಯಾಗಿದೆ.

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 3 ಜನ ಆರೋಪಿಗಳು ಪರಾರಿಯಾಗಿದ್ದಾರೆ. ಇಬ್ಬರನ್ನು ಬಂಧಿಸಿದ್ದು,  1.90 ಕೆ.ಜಿ ತೂಕದ 4 ಒರಟು ಕೆತ್ತನೆಯ ಗಂಧದ ತುಂಡು. 17.70 ಕೆ.ಜಿ. ತೂಕದ ಗಂಧದ ಚೆಕ್ಕೆ ವಶಪಡಿಸಿಕೊಂಡಿದ್ದಾರೆ.

ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಎನ್.ಆರ್. ಹರೀಶ್, ಅರಣ್ಯ ರಕ್ಷಕ ಎಂ. ಹೇಮಂತ್, ಚಿದಾನಂದಮೂರ್ತಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News