ಮಗನ ಚಿಕಿತ್ಸೆಗೆ ನೆರವು ನೀಡಲು ಮನವಿ
Update: 2017-07-29 19:44 IST
ಮಂಡ್ಯ, ಜು.29: ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಗನ ಚಿಕಿತ್ಸೆಗೆ ದಾನಿಗಳು ನೆರವು ನೀಡುವಂತೆ ತಾಲೂಕಿನ ಹೊಡಾಘಟ್ಟ ಗ್ರಾಮದ ನಿವಾಸಿ ಶೇಖರ್ ಎಂಬುವರು ಮನವಿ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕನೆ ತರಗತಿ ವ್ಯಾಸಂಗ ಮಾಡುತ್ತಿರುವ ತನ್ನ ಪುತ್ರ ಯಶ್ವಂತ್ ಕಳೆದ 15 ತಿಂಗಳಿಂದ ಬ್ಲಡ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈಗಾಗಲೆ ಚಿಕಿತ್ಸೆಗೆ 10 ರಿಂದ 12 ಲಕ್ಷ ರೂ. ವೆಚ್ಚವಾಗಿದೆ ಎಂದರು.
ತನ್ನ ಮಗ ಗುಣಮುಖನಾಗಲು ಸುಮಾರು 8 ಲಕ್ಷ ರೂ. ಬೇಕಾಗಿದ್ದು, ಬಡವನಾದ ತಾನು ಅಷ್ಟೊಂದು ಹಣ ಭರಿಸಲು ಸಾಧ್ಯವಾಗುವುದಿಲ್ಲ. ಕೂಲಿನಾಲಿ ಮಾಡಿ ಇಲ್ಲಿವರೆಗೆ ಲಕ್ಷಾಂತರ ರೂ. ವೆಚ್ಚಮಾಡಿದ್ದೇವೆ ಎಂದು ಅವರು ಅಳಲು ತೋಡಿಕೊಂಡರು.
ಸಹಾಯ ಮಾಡಲಿಚ್ಚಿಸುವವರು ಬಸರಾಳು ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಅಕೌಂಟ್ ನಂಬರ್ 1297101014257 ಗೆ ಹಣ ಸಂದಾಯ ಮಾಡುವಂತೆ ಅವರು ಮನವಿ ಮಾಡಿದರು. ಹೆಚ್ಚಿನ ವಿವರಗಳಿಗೆ ದೂ.8884903321 ಸಂಪರ್ಕಿಸಬಹುದು.