×
Ad

ಪ್ರಾಣ ಬೆದರಿಕೆ ಆರೋಪ: ಪೊಲೀಸ್ ರಕ್ಷಣೆಗೆ ಮನವಿ

Update: 2017-07-29 19:52 IST

ಮಂಡ್ಯ, ಜು.29: ಬನ್ನಾರಿ ಎಂಬುವರು ತನ್ನ ಮನೆಗೆ ಬೆಂಕಿ ಹಂಚಿ ಕೊಲ್ಲುವ ಪ್ರಯತ್ನ ನಡೆಸಿದ್ದು, ಸೂಕ್ತ ರಕ್ಷಣೆ ನೀಡುವಂತೆ ಶ್ರೀರಂಗಪಟ್ಟಣ ತಾಲೂಕು ಮುಂಡಗದೊರೆ ಗ್ರಾಮದ ಕೃಷ್ಣ ಎಂಬುವರು ಬೋವಿ ಜನಾಂಗದ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಂ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಹಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮುಂಡಗದೊರೆ ಗ್ರಾಮದಲ್ಲಿ ಬೋವಿ ಜನಾಂಗದ 2-3 ಮನೆಗಳಿದ್ದು, ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ. ಜು.20 ರಂದು ಗ್ರಾಮದ ಬನ್ನಾರಿ ಮತ್ತವನ ಪತ್ನಿ ಭಾಗ್ಯ ನಾನು ಮತ್ತು ನನ್ನ ಸಹೋದರ ಶಿವರಾಮು ಮಲಗಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಕೊಲ್ಲುವ ಯತ್ನ ನಡೆಸಿದ್ದಾರೆ ಎಂದು ಮನವಿyಲ್ಲಿ ಆರೋಪಿಸಲಾಗಿದೆ.

ಪಕ್ಕದ ಮನೆ ಬಾಗಿಲಿನ ಬೀಗವನ್ನು ಹೊರಗಡೆಯಿಂದ ಬಂದ್ ಮಾಡಿ ಈ ಕೃತ್ಯವೆಸಗಿದ್ದರಿಂದ ಅವರು ಸಹಾಯಕ್ಕೆ ಬರಲು ಸಾಧ್ಯವಾಗಲಿಲ್ಲ. ನಾವೇ ಬಾಗಿಲು ಮುರಿದು ಹೊರಬಂದು ಉಳಿದುಕೊಂಡೆವು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಂತರ, ಸ್ಥಳೀಯ ಸಹಕಾರದಿಂದ ಗುಡಿಲಿಗೆ ಹಚ್ಚಿದ್ದ ಬೆಂಕಿನಂದಿಸುವ ಪ್ರಯತ್ನ ನಡೆಯಿತು. ಕೊನೆಗೆ ಅಗ್ನಿಶಾಮಕ ದಳ ಕರೆಯಿಸಿ ಬಂಕಿ ನಂದಿಸಲಾಯಿತು. ಇದರಿಂದ ಅಪಾರ ನಷ್ಟವಾಗಿದೆ. ಜತೆಗೆ ಪ್ರಾಣ ಬೆದರಿಕೆ ಇದೆ ಎಂದು ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಬಸವರಾಜು, ಶ್ರೀನಿವಾಸ್, ಶಂಕರ್, ಪುಟ್ಟಸ್ವಾಮಿ, ರಾಮ, ಮಮತ ಹಾಗು ಚಂದ್ರಮ್ಮ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News