ಮುಖ್ಯಪೇದೆಯಿಂದ ಮಹಿಳೆಯರಿಬ್ಬರಿಗೆ ಲೈಂಗಿಕ ಕಿರುಕುಳ
Update: 2017-07-29 20:20 IST
ತುಮಕೂರು.ಜು.29: ಪಿ.ಎಸ್.ಐ ಓರ್ವ ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಪ್ರಕರಣ ಪೊಲೀಸರಿಂದ ನಡೆದಿದ್ದು, ಈ ಸಂಬಂಧ ಮುಖ್ಯ ಪೇದೆಯೊಬ್ಬರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಬಂಧಿತ ಪೊಲೀಸ್ ಮುಖ್ಯ ಪೇದೆ ಜಯನಗರ ಪೊಲೀಸ್ ಠಾಣೆಯ ಮೋಹನಕುಮಾರ್ ಆಗಿದ್ದು, ಇದು ಕಳೆದ ಆರು ವರ್ಷಗಳಿಂದ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧಿವಿರಿಸಿಕೊಂಡಿದ್ದಲ್ಲದೆ, ಈಗ ಆಕೆಯ ಮಗಳ ಮೇಲೆ ಕಣ್ಣು ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಮಗಳು ಮಹಿಳಾ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿ ಮೋಹನ್‌ಕುಮಾರನನ್ನು ಬಂಧಿಸಲಾಗಿದೆ.
ಎರಡು ಪ್ರಕರಣಗಳು ಮಹಿಳಾ ಐಪಿಎಸ್ ಅಧಿಕಾರಿಗಳ ಅವಧಿಯಲ್ಲಿಯೇ ನಡೆದಿರುವುದು ದುರಂತವೇ ಸರಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.