ವಿವಾಹಿತ ಮಹಿಳೆ ನಾಪತ್ತೆ: ಪ್ರಕರಣ ದಾಖಲು
Update: 2017-07-29 21:16 IST
ಮುಂಡಗೋಡ, ಜು.29: ವಿವಾಹಿತ ಮಹಿಳೆಯೋರ್ವಳು ಕಾಣೆಯಾದ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಳಗಿ ಗ್ರಾ.ಪಂ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ವಿಜಯಲಕ್ಷ್ಮೀ ಲಕ್ಷ್ಮೇಶ ಭಟ್ಟ (21) ಕಾಣೆಯಾದ ಮಹಿಳೆಯಾಗಿದ್ದಾಳೆ.
ಜುಲೈ 18 ರಂದು ಸಂಜೆ ಮನೆಹತ್ತಿರವಿರುವ ಈಶ್ವರ ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿಹೋದವಳು ಈ ವರೆಗೂ ಬರದೆ ಕಾಣೆಯಾಗಿದ್ದಾಳೆ. ಈಕೆಯ ಇರುವಕೆಯ ಕುರಿತು ಪರಿಚಯಸ್ಥರ, ಸಂಬಂಧಿಕರನ್ನು ಕೇಳಲಾಗಿದೆ. ಎಲ್ಲಿಯೂ ಕಾಣೆಯಾದವಳ ಮಾಹಿತಿ ಸಿಗದೇ ಇರುವುದರಿಂದ ಮಹಿಳೆಯ ಸಂಭಂದಿಕರು ಪ್ರಕರಣ ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯ ತವರೂರು ಹುಬ್ಬಳ್ಳಿಯ ಶೇರವಾಡ ಗ್ರಾಮವಾಗಿದ್ದು, ಕಳೆದ 2 ತಿಂಗಳ ಹಿಂದೆ ಹೊಸಕೊಪ್ಪ ಗ್ರಾಮದ ಲಕ್ಷ್ಮೇಶ ಭಟ್ಟಜತೆ ವಿವಾಹವಾಗಿತ್ತು ಎಂದು ಹೇಳಲಾಗಿದೆ.