×
Ad

ಡಿಸೈನ್ ತರಬೇತಿ ಸಂಸ್ಥೆ ಉಧ್ಘಾಟನೆ

Update: 2017-07-30 17:05 IST

ಚಿಕ್ಕಮಗಳೂರು, ಜು.30: ವಿದ್ಯಾವಂತ ಯುವಜನತೆ ಸರ್ಕಾರಿ ಉದ್ಯೋಗಕ್ಕೇ ಜೋತುಬೀಳದೇ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಎಐಟಿ ಪ್ರಾಂಶುಪಾಲ ಡಾ॥ ಸಿ.ಕೆ ಸುಬ್ರಾಯ ಸಲಹೆ ನೀಡಿದರು.

ಅವರು ಭಾನುವಾರ ನಗರ ಹೊರವಲಯದ ಅರಸು ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡ ಬೇಸ್‌ಪ್ರೋ ಇನ್ಸಿಟಿಟ್ಯೂಟ್ ಆಫ್ ಆರ್ಟ್ ಅಂಡ್ ಡಿಸೈನ್ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಹಳಷ್ಟು ವರ್ಷಗಳ ಹಿಂದೆ ಯುವಕರು ಸರ್ಕಾರಿ ಉದ್ಯೋಗಳಿಗೇ ಅವಲಂಬಿತರಾಗಬೇಕಿತ್ತು. ಆದರೆ ಆಧುನೀಕರಣದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ತಂತ್ರಜ್ಞಾನದಲ್ಲಿ ಮುಂದಿದೆ. ಇದರಿಂದಾಗಿ ಅನೇಕ ಖಾಸಗಿ ಕಂಪನಿಗಳು ಹುಟ್ಟಿಕೊಂಡಿದ್ದು, ನಿರುದ್ಯೋಗ ಸಮಸ್ಯೆಯನ್ನು ಬಹಳಷ್ಟು ಕಡಿಮೆ ಮಾಡಿವೆ ಎಂದರು. ಇದರ ಜೊತೆಗೆ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡೆಕೋರೇಷನ್, ಟೈಲರಿಂಗ್, ಕಂಪ್ಯೂಟರ್ ಸೇರಿದಂತೆ ಅನೇಕ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ಸರ್ಕಾರ ಮತ್ತು ಖಾಸಗೀ ಸಂಸ್ಥೆಗಳು ನೀಡುತ್ತಿವೆ ಎಂದ ಅವರು, ಯುವಜನತೆ ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಆ ಮೂಲಕ ರಾಷ್ಟ್ರದ ಪ್ರಗತಿಗೆ ದುಡಿಯಬೇಕು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯಕುಮಾರ್ ಮಾತನಾಡಿ, ಬಡಜನರಿಗೆ ಆರ್ಥಿಕವಾಗಿ ಹೊರೆಯಾಗದಂತೆ ನೂತನ ಸಂಸ್ಥೆ ತರಬೇತಿ ನೀಡಬೇಕು ಎಂದು ಸಲಹೆ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಬದುಕನ್ನು ಕಲಿಸುವ ನಿಟ್ಟಿನಲ್ಲಿ ಸಂಸ್ಥೆ ಆರಂಭಿಸಿರುವುದು ಸಂತಸದ ಸಂಗತಿ ಎಂದರು.

ಶೈಕ್ಷಣಿಕ ಸಲಹೆಗಾರ ವಿನಯ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎ.ದಿನೇಶ್ ಗುಪ್ತ ಸ್ವಾಗತಿಸಿದರು, ಪ್ರಾಂಶುಪಾಲೆ ಅನುಪಮಾ ದಿನೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News