×
Ad

ಸ್ಥಿತಿವಂತರು ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದೆ ಬರಬೇಕು: ವಿ.ಎಂ.ನಾಯ್ಕ್

Update: 2017-07-30 17:15 IST

ಭಟ್ಕಳ, ಜು.30: ಸಮಾಜದಲ್ಲಿರುವ ಸ್ಥಿತಿವಂತರು ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ ಸಮಾಜದ ಬಡ ವರ್ಗದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವಂತಾಗಬೇಕು ಎಂದು ನಿವೃತ್ತ ತಹಶೀಲ್ದಾರ ವಿ.ಎಂ. ನಾಯ್ಕ ಹೇಳಿದರು.

ಅವರು ರವಿವಾರದಂದು ಬೆಳಿಗ್ಗೆ ನಗರದ ಆಸರಕೇರಿ ನಾಮಧಾರಿ ಸಮಾಜದ ಸಬಾಭವನದಲ್ಲಿ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ನಾಮಧಾರಿ ಅಭಿವೃದ್ದಿ ಸಂಘದಿಂದ ನೀಡಲ್ಪಡುವ ಪ್ರತಿಭಾ ಪುರಸ್ಕಾರಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಹಿಂದಿನ ಕಾಲದಲ್ಲಿ ನಾವೆಲ್ಲರೂ ವಿದ್ಯೆ ಪಡೆಯಲು ಬಹಳ ಕಷ್ಟಪಟ್ಟಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಎಲ್ಲ ಬಗೆಯ ಸೌಲಭ್ಯಗಳಿದ್ದರೂ ವಿದ್ಯೆಯಲ್ಲಿ ಹಿಂದುಳಿಯುತ್ತಾರೆ. ಸಮಾಜದಕಟ್ಟ ಕಡೆಯ ವ್ಯಕ್ತಿಗಳ ಮಕ್ಕಳೂ ವಿದ್ಯಾವಂತರಾಗಿ ಮುಂದೆ ಬರಲು ಎಲ್ಲರ ಸಹಕಾರ ಅಗತ್ಯ ಎಂದರಲ್ಲದೇ, ಪಾಲಕರು ಸಹ ತಮ್ಮ ಮಕ್ಕಳ ವಿದ್ಯಾಬ್ಯಾಸದ ಕಡೆಗೆ ಗಮನ ನೀಡಿ ಅವರನ್ನುಗುರಿ ಮುಟ್ಟಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನೋಭಾವ ಹೊಂದಿವಂತಾಗಬೇಕು ಎಂದರಲ್ಲದೇ, ನಾವು ನಮ್ಮ ಮನೆ ಊರು ಬಿಟ್ಟು ಹೊರಗಡೆ ಕೆಲಸ ಮಾಡಿದಾಗಲೇ ಹೊರ ಜಗತ್ತಿನ ಅರಿವಾಗುತ್ತದೆ. ಸತತ ಪರಿಶ್ರಮದಿಂದ ವಿದ್ಯೆಯನ್ನುಗೆಲ್ಲಲು ಸಾಧ್ಯಎಂದರು.

ವೇದಿಕೆಯಲ್ಲಿ ನಾಮಧಾರಿ ಅಭಿವೃದ್ದಿ ಸಂಘದ ಮಾಜಿಅಧ್ಯಕ್ಷಎಲ್.ಎಸ್. ನಾಯ್ಕ, ಉಪಾಧ್ಯಕ್ಷ ಮೋಹನ ನಾಯ್ಕ, ರಾಜೇಶ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಶಿಲ್ಪ.ಟಿ. ನಾಯ್ಕ, ಕ್ರೀಡಾಪಟು ನವೀನ ನಾಯ್ಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಪಿ.ಯುಸಿ. ಹಾಗೂ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಂಜುನಾಥ ನಾಯ್ಕ ಪ್ರಾರ್ಥಿಸಿದರು.ಕೆ.ಆರ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ನಾಯ್ಕ ಸ್ವಾಗತಿಸಿದರು. ತಲಗೆಡು ವೆಂಕಟೇಶ ನಾಯ್ಕ ವಂದಿಸಿದರು. ಮಂಜುನಾಥ ಮುಂಡಳ್ಳಿ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News