ವಿದ್ಯುತ್ ತಂತಿ ತಗುಲಿ ಮಹಿಳೆ ಮೃತ್ಯು
Update: 2017-07-30 17:21 IST
ಹೊನ್ನಾವರ, ಜು.30; ತಾಲೂಕಿನ ಹಾಡಗೇರಿಯ ಮನೆತೋಟದಲ್ಲಿ ಅಡಕೆ ಹೆಕ್ಕುತ್ತಿದ್ದಾಗ ಜೋರಾದ ಗಾಳಿ ಮಳೆಗೆ ಮರದ ವಿದ್ಯುತ್ ಕಂಬ ಮೈಮೇಲೆ ಮುರಿದು ಬಿದ್ದು, ಶಾಕ್ ಹೊಡೆದು ಅಂಗನವಾಡಿ ಶಿಕ್ಷಕಿ ಮಂಗಲಾ ನಾರಾಯಣ ನಾಯ್ಕ(39) ಮೃತಪಟ್ಟಿದ್ದಾರೆ.
ತೋಟದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಮರದ ಕಂಬಗಳನ್ನು ಹಾಕಲಾಗಿದೆ. ಜೋರಾದ ಗಾಳಿ ಮಳೆ ಬಂದಾಗ ಶಿಥಿಲಗೊಂಡಿದ್ದ ಮರದ ಕಂಬ ಮುರಿದು ಬಿತ್ತು. ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಹರಿಯುತ್ತಿದ್ದರಿಂದ ದೇಹ ಸುಟ್ಟು ಹೋಗಿದೆ. ನಗರಬಸ್ತಿಕೇರಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.