ನಿಧನ
Update: 2017-07-30 18:20 IST
ಕಡೂರು, ಜು 30: ಪುರಸಭೆ ಸದಸ್ಯ ಕೆ.ಎಂ.ಮೋಹನ್‌ಕುಮಾರ್‌ರ ತಾಯಿ ಯಶೋಧಮ್ಮ (70) ಶನಿವಾರ ಸಂಜೆ ನಿಧನ ಹೊಂದಿದರು.
ಮೃತ ಯಶೋಧಮ್ಮ ಅವರಿಗೆ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.
ಮೃತರು ಪತಿ ಭಂಡಾರಿ ಮಲ್ಲಯ್ಯ, ಪುರಸಭಾ ಸದಸ್ಯ ಮೋಹನ್‌ಕುಮಾರ್ ಸೇರಿದಂತೆ ಇಬ್ಬರು ಪುತ್ರರು, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಭಾನುವಾರ ಅವರ ತೋಟದಲ್ಲಿ ನೆರವೇರಿತು.