ಹಾವು ಕಚ್ಚಿ ವ್ಯಕ್ತಿ ಸಾವು
Update: 2017-07-30 18:39 IST
ಹಾಸನ, ಜು.30: ತನ್ನ ಜಮೀನಿನಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಹಾವೊಂದು ಕಚ್ಚಿ ವ್ಯಕ್ತಿ ಓರ್ವ ಸಾವನಪ್ಪಿದ ಘಟನೆ ನೆನ್ನೆ ನಡೆದಿದೆ.
ಅರಕಲಗೂಡು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದ ನಿವಾಸಿ ಕರೀಗೌಡ (58) ಎಂಬುವರೇ ವಿಷಪೂರಿತ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟ ದುರ್ಧೇವಿ.
ಕಳೆದ ಮೂರು ದಿನಗಳ ಹಿಂದೆ ಎಂದಿನಂತೆ ತನ್ನ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಗಮನಕ್ಕೆ ಬಾರದೆ ಮಂಡಲದ ಹಾವೊಂದು ಇತನಿಗೆ ಕಚ್ಚಿದೆ. ತಕ್ಷಣ ಕಿರುಚಿಕೊಂಡಿದ್ದು, ಸುತ್ತ ಮತ್ತಲು ಇದ್ದ ಗ್ರಾಮಸ್ಥರು ಹಾವನ್ನು ಹಿಡಿದು ಸಾಯಿಸಿದರು. ತಕ್ಷಣ ಕರೀಗೌಡನನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ಸೇರಿಸಲಾಯಿತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆ ಉಸಿರು ಎಳೆದಿದ್ದಾರೆ.