ಬಸ್ ನಿಲ್ದಾಣಕ್ಕಾಗಿ ಪುಟ್ಟಣ್ಣಯ್ಯಗೆ ಶಾಲಾ ಮಕ್ಕಳ ಮನವಿ
Update: 2017-07-30 20:28 IST
ಪಾಂಡವಪುರ, ಜು.30: ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್‌ನಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತೆ ಕೋರಿ ಗ್ರಾಮದ ಆದರ್ಶ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ರವಿವಾರ ಮನವಿ ಸಲ್ಲಿಸಿದರು.
ಎಲೆಕೆರೆ ಗ್ರಾಮದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಕಾರ್ಯನಿಮಿತ್ತ ಎಲೆಕೆರೆ ಹ್ಯಾಂಡ್ ಪೋಸ್ಟ್ ಮೂಲಕ ಪಾಂಡವಪುರಕ್ಕೆ ಹೋಗುತ್ತಿದ್ದ ಶಾಸಕರ ಕಾರನ್ನು ಕಂಡ ಕೂಡಲೇ ಕಾರನ್ನು ಸುತ್ತುವರೆದು ಬಸ್ ನಿಲ್ದಾಣ ನಿರ್ಮಿಸುವಂತೆ ಕೋರಿದರು.
ಮಕ್ಕಳ ಮನವಿಗೆ ಸ್ಪಂದಿಸಿದ ಪುಟ್ಟಣ್ಣಯ್ಯ, ತಕ್ಷಣ ಕಾರಿನಿಂದ ಕೆಳಗಿಳಿದು ಮಕ್ಕಳೊಂದಿಗೆ ಕೆಲಕಾಲ ನಿಂತಲ್ಲೆ ಸಂವಾದ ನಡೆಸಿ. ಆದಷ್ಟು ಬೇಗ ಬಸ್ ನಿಲ್ದಾಣ ನಿರ್ಮಿಸುವ ಭರವಸೆ ನೀಡಿದರಲ್ಲದೇ, ಮಕ್ಕಳಿಗೆ ಚಾಕಲೇಟ್ ಕೊಡಿಸಿ ಅವರ ಸಂತೋಷದಲ್ಲಿ ಭಾಗಿಯಾದರು.