×
Ad

ಬೈಕ್ ಕೇಳಿದಕ್ಕೆ ಕೊಡಲಿಲ್ಲ ಎಂದು ಬ್ಲೇಡ್ ನಿಂದ ಹಲ್ಲೆ

Update: 2017-07-30 20:46 IST

ಮುಂಡಗೋಡ, ಜು.30: ಬೈಕ್ ಕೇಳಿದಕ್ಕೆ ಕೊಡಲಿಲ್ಲ ಎಂದು ವ್ಯಕ್ತಿಯೋರ್ವ ಸಿಟ್ಟಿಗೆದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್ ಮಾಲಿಕನನ್ನು ಬ್ಲೇಡ್ ನಿಂದ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಶಿರಸಿ ತಾಲೂಕಿನ ಬನವಾಸಿ ಹೊಬಳಿಯ ದಾಸನಕೊಪ್ಪ ಗ್ರಾಮದ ಬಸ್ಟ್ಯಾಂಡ ಹತ್ತಿರ ನಡೆದಿದೆ.

ಸುನೀಲ್ ನಾಯಕ್ ಎನ್ನವು ವ್ಯಕ್ತಿಯೇ ಗಾಯಗೊಳಿಸಿ ಕೊಲೆ ಬೆದರಿಕೆಹಾಕಿದ ವ್ಯಕ್ತಿಯಾಗಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಮಂಜುನಾಥ ಜಕ್ಕಣ್ಣವರ ಎಂದು ಹೇಳಲಾಗಿದೆ.

ಮಂಜುನಾಥ ಶುಕ್ರವಾರ ರಾತ್ರಿ ದಾಸನಕೊಪ್ಪ ಬಸ್‌ಸ್ಟ್ಯಾಂಡ್ ಹತ್ತಿರ ಮೊಟಾರ ಬೈಕ್ ತೆಗೆದುಕೊಂಡು ನಿಂತಿರುವಾಗ ಆರೋಪಿ ಸುನೀಲ್ ಬಂದು ಬೈಕ್ ಚಾವಿ ಕೇಳಿದ ಎಂದು ಹೇಳಲಾಗಿದ್ದು, ಬೈಕ್ ಚಾವಿ ನೀಡಲು ಮಂಜುನಾಥ ನೀರಾಕರಿಸಿದ್ದಾನೆ ಎನ್ನಲಾಗಿದ್ದು, ಇದಕ್ಕೆ ಕೋಪಗೊಂಡ ಸುನೀಲ್ ಮಂಜುನಾಥನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಲೇಡ್ ನಿಂದ ಕುತ್ತಿಗೆಯ ಎಭಾಗಕ್ಕೆ ಹೊಡೆದು ಗಾಯಪಡಿಸಿದ್ದಾನೆ. ತಪ್ಪಿಸಲು ಬಂದ ಮಂಜುನಾಥ ಸ್ನೇಹಿತ ಜಾಬೀರ್ ಮಿಠಾರಿ ಯ ಕೈ ಬೆರಳಿಗೆ ಬ್ಲೇಡ್ ನಿಂದ ಗಾಯಗೊಳಿಸಿದ್ದಾನೆ. ಹಾಗೂ ಹೋಗುವಾಗ ಕೊಲೆಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News