×
Ad

ಮನೆಯ ಬೀಗ ಮುರಿದು ಕಳ್ಳತನ

Update: 2017-07-30 20:49 IST

ಮುಂಡಗೋಡ( ದಾಂಡೇಲಿ), ಜು.30 :ಮನೆಯ ಬೀಗ ಮುರಿದು ಸುಮಾರು 23 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳುವು ಮಾಡಿದ ಘಟನೆ ತಾಲೂಕಿನ ಕೆಎಚ್‌ಬಿ ಕಾಲೋನಿಯಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ 9 ಗಂಟೆಯಿಂದ ಶನಿವಾರ ಬೆಳಗ್ಗೆ 8 ಗಂಟೆಯ ಮಧ್ಯ ಕಳ್ಳರು ಕೈ ಚಳಕ ತೋರಿಸಿದ್ದಾರೆ ಎಂದು ಹೇಳಲಾಗಿದೆ. ಮನೆಯ ಬೀಗವನ್ನು  ಆಯುಧದಿಂದ ಮುರಿದು ಅಕ್ರಮ ಒಳಗೆ ಪ್ರವೇಶಿಸಿದ ಕಳ್ಳರು, ಕಪಾಟಿನಲ್ಲಿಟ್ಟಿದ್ದ 10 ಗ್ರಾಂ ಚಿನ್ನ ಹಾಗೂ 150 ಗ್ರಾಂ ಬೆಳ್ಳಿ ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಮನೆಯ ಮಾಲಿಕ ವಾಸಿಮ್ ಜಾಫರ್‌ ಸಾಧಿಕ್ ಮುಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News