ಜಾನವಾರು ಸಾಗಾಟ: ಇಬ್ಬರ ಬಂಧನ
Update: 2017-07-30 20:52 IST
ಮುಂಡಗೋಡ(ಯಲ್ಲಾಪುರ), ಜು.30: ಅಕ್ರಮವಾಗಿ ಜಾನವಾರುಗಳನ್ನು ಸಾಗಟಮಾಡುತ್ತಿದ್ದ ಇಬ್ಬರನ್ನು, ವಾಹನ ಸಹಿತ ಜಾನುವಾರಗಳನ್ನು ಪೊಲೀಸರು ವಶಪಡೆದುಕೊಂಡ ಘಟನೆ ಯಲ್ಲಾಪುರ(ತಾ) ಪಟ್ಟಣದ ಕೆಬಿ ರಸ್ತೆಯ ಕುಬೇರ ಹೊಟೇಲ್ ಹತ್ತಿರ ರಾಷ್ಟ್ರೀಯ ಶುಕ್ರವಾರ ರಾತ್ರಿ ಸಂಭವಿಸಿದೆ.
ಹುಬ್ಬಳ್ಳಿಯ ಅಂಚಟಗೇರಿ ಆಶ್ರಯ ಪ್ಲಾಟಿನ ರಾಜು ಅಲಿಯಾಸ ಮೌಲಾಲಿ ಜಂಗನೂರ(23) ಹಾಗೂ ಹಳೇ ಗಬ್ಬೂರ ಬೈಪಾಸ್ ರೋಡ್ ಮಾರುತಿ ದೇವಸ್ಥಾನ ಹತ್ತಿರದ ನಿವಾಸಿ ಗುರುಸಿದ್ದಪ್ಪ ಉಡಚ್ಚಮ್ಮನವರ(30) ಬಂದಿತ ಆರೋಪಿಗಳಾಗಿದ್ದಾರೆ. ಶುಕ್ರವಾರ ರಾತ್ರಿ ಮಹಿಂದ್ರಾ ಮ್ಯಾಕ್ಸ್ ವಾಹನದಲ್ಲಿ 1 ಎಮ್ಮೆ, 2 ಆಕಳು ಮತ್ತು 3 ಆಕಳ ಕರುಗಳನ್ನು ಯಾವುದೇ ಪಾಸ್, ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸಾಗಟಮಾಡುತ್ತಿದ್ದರು ಎಂದು ಹೇಳಲಾಗಿದೆ.
ವಾಹನವು ಅಂಕೋಲಾ ದಿಂದ ಹುಬ್ಬಳ್ಳಿಗೆ ಹೊರಟಿತ್ತು ಎಂದು ಹೇಳಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ