ಜು.31: ಭಟ್ಕಳದ 'ಮರಹಬಾ' ದಲ್ಲಿ ಮಹೆಫಿಲ್-ಎ-ಯಾರಾನ್ ಉರ್ದು ಮುಷಾಯಿರಾ
ಭಟ್ಕಳ, ಜು.30: ಅಂತರಾಷ್ಟ್ರೀಯ ಮುಷಾಯಿರಾ ನಿರೂಪಕ ಭಟ್ಕಳ ಮೂಲದ ಅನಿವಾಸಿ ಭಾರತೀಯ ರಹಮತುಲ್ಲಾ ರಾಹಿ ಅವರ ನಿರೂಪಣೆಯಲ್ಲಿ ಜು.31 ರಂದು ಇಲ್ಲಿನ ನವಾಯತ್ ಕಾಲೋನಿಯ ‘ಮರಹಬಾ' ದಲ್ಲಿ ರಾತ್ರಿ 9.00ಗಂಟೆಗೆ ಮಹೆಫಿಲ್-ಎ-ಯಾರಾನ್ ಉರ್ದು ಮುಷಾಯಿರಾ ನಡೆಯಲಿದೆ.
ಅಂತರಾಷ್ಟ್ರೀಯ ಖ್ಯಾತಿಯ ಕವಿಗಳಾದ ಇಮ್ರಾನ್ ಪ್ರತಾಪಗಡಿ, ಬಾಲಕವಿ ಸುಫಿಯಾನ್ ಪ್ರತಾಪಗಡಿ, ಹಾಸ್ಯ ಮತ್ತು ವ್ಯಂಗ್ಯ ಕವಿ ಹಾಗೂ ಬಾಲಿವುಡ್ ಹಾಸ್ಯ ನಟ ಎಹಸಾನ್ ಕುರೇಷಿ ಮುಷಾಯಿರದಲ್ಲಿ ಭಾಗವಹಿಸುತ್ತಿದ್ದಾರೆ.
ಉದ್ಯಮಿ ಅತೀಖುರ್ರಹ್ಮಾನ್ ಮುನಿರಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ತನ್ನ ಪುತ್ರನ ವಿವಾಹ ಸಮಾರಂಭವನ್ನು ಸಾಹಿತ್ಯ ಸೇವೆಗಾಗಿ ಬಳಸಿಕೊಂಡಿದ್ದು, ಇದೊಂದು ದಾಖಲೆಯ ವಿಷಯವಾಗಲಿದೆ ಎಂದರು. ಭಟ್ಕಳದ ಜನತೆಗೆ ಇದು ಚಿರಸ್ಮರಣೀಯವಾಗಲಿದೆ ಎಂದರು. ಮುಷಾಯಿರಾದಲ್ಲಿ ಅತಿಥಿ ಕವಿಗಳೊಂದಿಗೆ ಸ್ಥಳೀಯ ಕವಿಗಳಾದ ಸೈಯ್ಯದ್ ಸಮಿಯುಲ್ಲಾ ಬರ್ಮಾವರ್ ಮತ್ತು ರಿಝ್ವಾನ್ ಸುಕ್ರಿ ತಮ್ಮ ಶಾಯಿರಿಗಳ ಮೂಲಕ ಜನರನ್ನು ರಂಜಿಸಲಿದ್ದಾರೆ.
ಈ ಸಂದರ್ಭದಲ್ಲಿ ಅವರು ಭಟ್ಕಳದ ಸಾಹಿತ್ಯ ಪ್ರೇಮಿಗಳು ಸೋಮವಾರ ರಾತ್ರಿ ಮುಷಾಯಿರಾದಲ್ಲಿ ಭಾಗವಹಿಸುವುದರ ಮೂಲಕ ಮಹೆಫಿಲ್-ಎ-ಯಾರಾನ್ ಸಂಜೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ಮುಷಾಯಿರಾ ಸಾಹಿಲ್ ಆನ್ ಲೈನ್ ನಲ್ಲಿ ನೇರ ಪ್ರಸಾರವಾಗಲಿದ್ದು, ಆಸಕ್ತರು ಭೇಟಿ ನೀಡಿ ಇದರ ಚಂದಾದಾರರಾಗಬುಹುದಾಗಿದೆ.