ಕೊಂಕಣ ಖಾರ್ವಿ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಭಟ್ಕಳ, ಜು.31: ಪ್ರತಿಭೆ ಮತ್ತು ವಿದ್ಯೆ ಯಾವುದೇ ವ್ಯಕ್ತಿ ಅಥವಾ ಸಮಾಜಕ್ಕೆಮಾತ್ರ ಸೀಮಿತವಲ್ಲ ಎಂದು ಇಲ್ಲಿನ ಶ್ರೀ ಗುರು ಸುಧೀಂದ್ರ ಬಿ.ಬಿ.ಎ., ಬಿ.ಸಿ.ಎ. ಮತ್ತು ಬಿ.ಕಾಂ. ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್‌ಅವರು ಹೇಳಿದರು.
ಅವರು ಇಲ್ಲಿನ ಮಾವಿನ ಕುರ್ವೆ ಬಂದರಿನಲ್ಲಿ ಕೊಂಕಣ ಖಾರ್ವಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯರು ಶಿಕ್ಷಣದಲ್ಲಿ ಬಹಳ ಮುಂದೆ ಇದ್ದಾರೆ. ಹಾಗೆಯೇ ಪ್ರತಿಭೆಗೂ ಕೂಡಾ ಯಾವುದೇ ಕೊರತೆ ಇಲ್ಲ ಎಂದ ಅವರು, ನಮ್ಮಲ್ಲಿಯ ಅನೇಕರು ಇಂದು ಜಗದ್ವಿಖ್ಯಾತಿಯ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆಂದರೆ ಅದಕ್ಕಿಂತ ಹೆಮ್ಮೆಯ ವಿಷಯ ಬೇರಾವುದೂ ಇಲ್ಲ. ಶಿಕ್ಷಣ ನಮ್ಮಲ್ಲಿರುವ ಪ್ರತಿಭೆಯನ್ನು ಜಾಗೃತಗೊಳಿಸುವುದು, ನಾವು ಪಡೆದ ಶಿಕ್ಷಣವನ್ನು ಬೇರೆಯವರಿಗೆ ವರ್ಗಾವಣೆ ಮಾಡಿದಾಗ ಮಾತ್ರ ನಮ್ಮ ಪ್ರತಿಭೆಗೆ ಫಲ ದೊರೆಯುವುದು ಎಂದು ಹೇಳಿದ ಅವರು, ವಿದ್ಯಾರ್ಥಿಗಳಲ್ಲಿ ಜ್ಞಾನ ಸಂಪಾದನೆಯ ಗುರಿಯಿರಬೇಕು. ಗುರಿಯನ್ನಿಟ್ಟುಕೊಂಡು ಮುನ್ನಡೆದಾಗ ಅದನ್ನು ತಲುಪುವುದು ಅತ್ಯಂತ ಸುಲಭವಾಗುವುದು. ನಮ್ಮ ಭಾರತೀಯರು ಮಾಡಿದ ಸಾಧನೆಗೆ ಇತರ ಎಲ್ಲ ದೇಶಗಳೂ ಕೂಡಾ ಭಾರತವನ್ನು ನೋಡುವಂತೆ ಮಾಡಿದೆ. ವಿದ್ಯಾರ್ಥಿಗಳಿಗೆ ಇಂದು ಅನೇಕ ಅವಕಾಶಗಳಿವೆ. ಬೇರೆ ಬೇರೆ ಕೋರ್ಸುಗಳು ದೊರೆಯುತ್ತಿದ್ದು ಅವುಗಳ ಕುರಿತು ಮಾಹಿತಿ ಕಲೆ ಹಾಕಿ ಆ ಕುರಿತು ಪ್ರಯತ್ನಿಸುವಂತೆಯೂ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ನಮ್ಮಜೀವನದಲ್ಲಿ ಶಿಸ್ತು, ಸಹನೆ, ಸಂಯಮವನ್ನು ಪಾಲಿಸಿಕೊಂಡು ಬಂದಾಗ ವಿದ್ಯಾರ್ಥಿಗಳು ಯಶಸ್ಸನ್ನು ಹೊಂದಲು ಸಾಧ್ಯವಾಗುವುದು. ವಿದ್ಯೆಯನ್ನು ವಿನಯದಿಂದ ಪಡೆದಾಗ ಮಾತ್ರ ಅದು ಸಾರ್ಥಕವಾಗುವುದು, ನಾನು ಎನಾಗಬೇಕು ಎನ್ನುವುದುನ್ನು ನಿಮ್ಮ ಕೆಳಹಂತದಿಂದಲೇ ನಿರ್ಧರಿಸಿ ಮುನ್ನೆಡೆದಾಗ ಮಾತ್ರ ಗುರಿತಲುಪಸಲು ಸಾಧ್ಯ. ಅವಕಾಶ ಸಿಕ್ಕಿದಲ್ಲಿ ನೀವು ಹೋದರೆ ಅದು ವ್ಯರ್ಥವಾಗುವುದು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯರಾದಗಣಪತಿ ಜಿ. ಖಾರ್ವಿ ಮಾತನಾಡಿದರು. ವೇದಿಕೆಯಲ್ಲಿಕೊಂಕಣಖಾರ್ವಿ ಸಮಾಜದ ಪ್ರಧಾನ ಕಾರ್ಯದರ್ಶಿ ರತ್ನಾಕರಖಾರ್ವಿ, ಉಪಾಧ್ಯಕ್ಷತಿಮ್ಮಪ್ಪ ಎಂ. ಖಾರ್ವಿ, ಪ್ರಮುಖರಾದ ಶೇಷ ಖಾರ್ವಿ, ತಿಮ್ಮಪ್ಪ ಮಂಜುನಾಥಖಾರ್ವಿ, ರಮೇಶಎನ್. ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ 11 ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಪ್ರೊತ್ಸಾಹಧನ ನೀಡಿ ಗೌರವಿಸಲಾಯಿತು. ಉಳಿದಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಅನುಷಾ ಖಾರ್ವಿ ಹಾಗೂ ನಿಖಿತಾಖಾರ್ವಿ ಪ್ರಾರ್ಥಿಸಿದರು. ಖಾರ್ವಿ ಸಮಾಜದ ಹಿರಿಯರಾದ ವಸಂತಖಾರ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮದಾಸಖಾರ್ವಿ ನಿರೂಪಿಸಿದರು. ರಮೇಶಖಾರ್ವಿ ವಂದಿಸಿದರು.