×
Ad

ಸಾರ್ವಜನಿಕರ ಸಂಪರ್ಕಕ್ಕಾಗಿ ಪೊಲೀಸ್ ಬೀಟ್ ವ್ಯವಸ್ಥೆ: ವಿನಾಯಕ ಪಟೇಲ್

Update: 2017-07-31 18:03 IST

ಭಟ್ಕಳ, ಜು.31: ಸಾರ್ವಜನಿಕರು ಮತ್ತು ಪೊಲೀಸ ಇಲಾಖೆಯ ಮಧ್ಯೆ ಉತ್ತಮ ಬಾಂದವ್ಯ ಕಲ್ಪಿಸಲು ಹೊಸ ಜನಸ್ನೇಹಿ ಬೀಟ್ ವ್ಯವಸ್ಥೆ ಎಲ್ಲೆಡೆ ಜ್ಯಾರಿಗೊಳಿಸಲಾಗಿದ್ದು, ಮೊದ ಮೊದಲು ಜನರು ಸ್ಪಂಧಿಸಲು ಸಂಶಯ ಪಡುತ್ತಿದ್ದರೆ ಇಂದು ಎಲ್ಲರೂ ಕೂಡಾ ಉತ್ತಮವಾಗಿ ಸ್ಪಂಧಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿನಾಯಕ ಪಾಟೀಲ್ ಹೇಳಿದರು.

ಅವರು ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಹೊಸ ಬೀಟ್ ವ್ಯವಸ್ಥೆ ಅಂಗವಾಗಿ ಏರ್ಪಡಿಸಲಾಗಿದ್ದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಂತಿ ಸುವ್ಯವಸ್ಥೆಕಾಪಾಡುವ ಹೊಣೆಗಾರಿಕೆ ಸಾರ್ವಜನಿಕರ ಮೇಲೂ ಇದೆ.ಪೊಲೀಸರು ಸಮವಸ್ತ್ರವನ್ನು ಧರಿಸಿ ಕರ್ತವ್ಯವನ್ನು ನಿರ್ವಹಿಸಿದರೆ, ಸಾರ್ವಜನಿಕರು ಸಮವಸ್ತ್ರವಿಲ್ಲದೇ ಪೊಲಿಸ್ ಕೆಲಸವನ್ನು ನಿರ್ವಹಿಸುವವರು. ಪೊಲೀಸರ ಮತ್ತು ಸಾರ್ವಜನಿಕರ ಮಧ್ಯೆಉತ್ತಮ ಸಂಪರ್ಕವಿದ್ದಲ್ಲಿ ಅಪರಾಧ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭವಾಗಲಿದೆ. ಜನಸ್ನೇಹಿ ಬೀಟ್ ವ್ಯವಸ್ಥೆಯಲ್ಲಿ ಬೀಟ್ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಒಂದು ಬೀಟ್‌ನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಬೀಟ್‌ ಕಾನ್ಸಟೇಬಲ್‌ಗಳು ಗಮನಿಸಬೇಕಾಗುತ್ತದೆ ಎಂದ ಅವರು, ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ಬೇರೆ ಬೇರೆ ರೀತಿಯ 21 ಸೇವೆಗಳನ್ನು ನೀಡುತ್ತಿದೆ. ಸಿಬ್ಬಂದಿಗಳು ಉತ್ತಮ ಕೆಲಸ ಮಾಡಿದಲ್ಲಿ ಸಾರ್ವಜನಿಕರು ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
 

  
ಸಾರ್ವಜನಿಕರ ಪರವಾಗಿ ರಂಜನ್‌ ಇಂಡೇನ್‌ ಗ್ಯಾಸ್‌ ಎಜೆನ್ಸಿಯ ಶಿವಾನಿ ಶಾಂತರಾಮ, ತಂಝೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾ ಬಂದ್ರಿ ಅಭಿಪ್ರಾಯ ವ್ಯಕ್ತಪಡಿಸಿದರೆ, ಬೀಟ್ ವ್ಯವಸ್ಥೆಯ ಬಗ್ಗೆ ಪೊಲೀಸ್ ಸಿಬ್ಬಂದಿ ಸುಜ್ಞಾನ್‌ ಅವರು ವಿವರವಾದ ಮಾಹಿತಿ ನೀಡಿದರು.
 ಡಿವೈಎಸ್ಪಿ ಎಂ ಓ ಶಿವಕುಮಾರ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಿಪಿಐ ಸುರೇಶ ನಾಯಕ ವಂದಿಸಿದರು. ಆರೋಗ್ಯಇಲಾಖೆಯ ಹಿರಿಯ ಸಹಾಯಕ ಈರಯ್ಯ ದೇವಾಡಿಗ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬೀಟ್ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News